ಕಂಪ್ಲಿ : ಮಹಿಳಾ ಸಮಾನತೆ ನೀಡಿದವರಲ್ಲಿ ಅಕ್ಕಮಹಾದೇವಿ ಪ್ರಮುಖ: ಪ್ರವೀಣ

ಲೋಕದರ್ಶನ ವರದಿ

ಕಂಪ್ಲಿ 01: ಇಲ್ಲಿನ ಸತ್ಯನಾರಾಯಣಪೇಟೆಯ ವರನಂದೀಶ್ವರ ಅಪಾಟರ್್ಮೆಂಟ್ನಲ್ಲಿನ ಸೈ'ಗ್ರಂಥಾಲಯ ಆವರಣದಲ್ಲಿ, ಗುರುವಾರ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕು ಘಟಕ ಹಮ್ಮಿಕೊಂಡ 106ನೇ ಮಹಾಮನೆ ಕಾರ್ಯಕ್ರಮ ಜರುಗಿತು.  ಇಲ್ಲಿನ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎನ್.ಪ್ರವೀಣ್ ಕುಮಾರ್ 'ಅಕ್ಕಮಹಾದೇವಿ ವಚನಗಳಲ್ಲಿ ಮಹಿಳಾ ಸಂವೇದನೆ' ಕುರಿತು ವಿಶೇಷ ಉಪನ್ಯಾಸ ನೀಡಿ, ಮಹಿಳಾ ಸಮಾನತೆಯನ್ನು, ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುವಲ್ಲಿ ಶಿವಶರಣೆ ಅಕ್ಕಮಹಾದೇವಿ ಪ್ರಮುಖಳಾಗಿದ್ದಾಳೆ. ಮಹಿಳೆಯಲ್ಲಿ ಸೂಕ್ತ ಸ್ಥಾನಮಾನ, ಬದ್ಧತೆಯ ಜಾಗೃತಿಯನ್ನು ಮೂಡಿಸುವಲ್ಲಿ ಅಕ್ಕನವಚನಗಳು ಇಂದಿಗೂ ಪ್ರಸ್ತುತವಾಗಿದೆ. ಸರಳವಾದ ಆಡು ನುಡಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಅಕ್ಕ ಜನಸಾಮಾನ್ಯರ ಗಮನಸೆಳೆಯುತ್ತಾಳೆ. ಎಂದುರು.

ರಂಗಭೂಮಿ ಕಲಾವಿದ ಕೆ.ಶ್ರೀನಿವಾಸಪ್ಪ ಮಹಾಮನೆಗೆ ಚಾಲನೆ ನೀಡಿದರು. ಶ್ರೀರಕ್ಷಾ ಪ್ರಾಥರ್ಿಸಿದರು, ಬಡಿಗೇರ ಜಿಲಾನ್ ಸ್ವಾಗತಿಸಿದರು, ಮಹ್ಮದ್ ಹನೀಫ್ ವಂದಿಸಿದರು, 

ಶರಣ ಸಾಹಿತ್ಯ ಪರಿಷತ್ತಿನಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ನಿರೂಪಿಸಿದರು.    ಶಿಕ್ಷಕಿ ಜುಬೇದಾ ಬೇಗಂ, ಸಾಜೀದಾ, ಜಾಹೀದಾ, ಗರಡಿ ಕಮಲ, ಸವಿತಾ, ಜಿ.ನಂದೀಶ್, ನಾಗವೇಣಪ್ರವೀಣ್ ಕುಮಾರ್, ಸೃಷ್ಠಿ, ಕುಂದನ್, ಚಿರಂತನ್, ಅಕ್ಷಿತ್ ಸೇರಿ ಅನೇಕರು ಉಪಸ್ಥಿತರಿದ್ದರು