ಕಾಗವಾಡ 09: ತಾಲೂಕಿನ ಮೋಳೆ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳೆದ ಐದು ದಿನಗಳಿಂದ ಕಂಬಿ ಐದೇಶಿ ಉತ್ಸವ ಕಾರ್ಯಕ್ರಮ ಮಂಗಳವಾರ ದಿ.08 ರಂದು ಮಲ್ಲಯ್ಯನ ಇಷ್ಟದ ನೈವೇದ್ಯ ಬೆಲ್ಲ ಹಂಚುವುದರೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ಗ್ರಾಮದಲ್ಲಿ ಬೆಳಿಗ್ಗೆಯಿಂದ ಹಿಂಡುಹಿಂಡಾಗಿ ಆಗಮಿಸಿದ ಭಕ್ತರು ಪೆಂಟ್ಟಿಗಟ್ಟಲೆ ಬೆಲ್ಲವನ್ನು ಹೊತ್ತು ತಂದು, ದೇವಸ್ಥಾನದಲ್ಲಿ ಹಂಚಿದರು. ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ತೆರಳಿ ಮಲ್ಲಿಕಾರ್ಜುನ ದರ್ಶನ ಮುಗಿಸಿ, ಬರುವ ಭಕ್ತರು ಗ್ರಾಮದಲ್ಲಿ ಮೊದಲ ದಿನ ಕಂಬಿ ಹಾಗೂ ನಂದಿಕೋಲನ್ನು ಆರತಿ ಮೂಲಕ ಸ್ವಾಗತಿಸಿ, ನಂತರ ಐದು ದಿನಗಳ ವಿಶಿಷ್ಟ ಉತ್ಸವ ಆಚರಣೆ ಮಾಡುತ್ತಾರೆ. ಪ್ರತಿ ದಿನ ವಿಶೇಷ ಪೂಜೆ ಹಾಗೂ ನೈವೇದ್ಯ ಮಾಡಿ, ದೇವರಿಗೆ ಅರ್ಿಸಿ, ಹರಕೆ ತಿರಿಸುತ್ತಾರೆ. ಕೊನೆಯ ದಿನವಾದ ನಿನ್ನೆ ಬೆಲ್ಲ ಹಂಚಿ ಉತ್ಸವ ಸಂಪನ್ನಗೊಂಡಿತು.
ಈ ವೇಳೆ ಮಲ್ಲಯ್ಯನ ಬಿರುದಾವಳಿ ಕಾರ್ಯಕ್ರಮ ನಡೆಯಿತು. ನಂದಿ ಕೋಲ ಹೊತ್ತು ಯುವಕರು ಕುಣಿದರು.
ಶ್ರೀಶೈಲಕ್ಕೆ ತೆರಳಿ ವಾಪಸ್ಸಾದ ಭಕ್ತರಿಗೆ ಸಂಭಂದಿಗಳು ಹೊಸ ಬಟ್ಟೆಗಳನ್ನು ತೊಡಿಸಿ, ಹರಕೆ ತೀರಿಸಿದರು. ಕಳೆದ ಐದು ದಿನಗಳಿಂದ ನಡೆದ ಐದೇಶಿ ಉತ್ಸವದಲ್ಲಿ ಪ್ರತಿ ದಿನ ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿಶೇಷ ಮನರಂಜನೆ ಆಟಗಳನ್ನು ಏರಿ್ಡಸಲಾಗಿತ್ತು. ಅದರಂತೆ ಪ್ರತಿದಿನ ಸಂಜೆ ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆಯನ್ನು ಕಮೀಟಿಯವರು ಮಾಡಿದ್ದರು.
ಸುತ್ತಮುತ್ತಲಿನ ಗ್ರಾಮಗಳ ಹಾಗೂ ತೋಟದ ವಸತಿಯ ಸಾವಿರಾರು ಜನರು ಉತ್ಸವಕ್ಕೆ ಆಗಮಿಸಿ, ವಿಶಿಷ್ಟ ಐದೇಶಿಯಲ್ಲಿ ಪಾಲ್ಗೊಂಡು, ತಮ್ಮ ಹರಕೆ ತೀರಿಸಿದರು. ಈ ವೇಳೆ ಪಾದಯಾತ್ರೆ ಕಮೀಟಿ ಹಾಗೂ ದೇವಸ್ಥಾನ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.