ನವದೆಹಲಿ, ನ 11 : ಪ್ರಜಾಪ್ರಭುತ್ವವದ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ, ನಂಬಿಕೆ, ವಿಶ್ವಾಸಾರ್ಹತೆ ಮೂಡಿಸುವಲ್ಲಿ ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ ಎನ್ ಶೇಷನ್ ಅವರು ನಿರ್ವಹಿಸಿದ ಪಾತ್ರವನ್ನು ದೇಶ ಮರೆಯಲು ಸಾಧ್ಯವೇ ಇಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಶೇಷನ್ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಗರಿಕ ಸೇವೆ ಅಧಿಕಾರಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ. ಅವರ ನಿಧನ ಭರಿಸಲಾಗದ ನೋವು ತಂದಿದೆ. ಓಂ ಶಾಂತಿ ಎಂದಿದ್ದಾರೆ. ಐ ಎ ಎಸ್ ಅಧಿಕಾರಿಯಾಗಿದ್ದ ಶೇಷನ್ ಅವರು ರಾಜೀವ್ ಗಾಂಧಿ ಕಾಲದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾಗಿ, ಮುಂದೆ ಸಂಪುಟ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದರು. ವಿ.ಪಿ.ಸಿಂಗ್ ಸರ್ಕಾರ ಇವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿತ್ತು.