ಬಣ್ಣದ ಹಬ್ಬದ ಪ್ರಯುಕ್ತ ಕಾಮಣ್ಣನ ಮೆರವಣಿಗೆ

Kamanna's procession on the occasion of the Holi festival

ಯಮಕನಮರಡಿ 14: ಸಮೀಪದ ಹತ್ತರಗಿ ಗ್ರಾಮದಲ್ಲಿ ಪ್ರತಿವರ್ಷದ ಪದ್ದತ್ತಿಯಂತೆ ಈ ವರ್ಷವೂ ದಿ.13 ರಂದು ವಿಜೃಂಭಣೆಯಿಂದ ಹೋಳಿಹಬ್ಬವನ್ನು ಆಚರಣೆ ಮಾಡಿ ಕಾಮಣ್ಣನ ಮೂರ್ತಿಗಳ ಮೇರವಣಿಗೆಗಳು ಯಶಸ್ವಿಯಾಗಿ ಜರುಗಿದವು. 

ಸುಮಾರು ಬ್ರಿಟೀಷರ ಆಳ್ವಿಕೆಯಿಂದ ನಡೆದು ಬಂದ ಈ ಸಂಪ್ರದಾಯವು ಸರಕಾರದಿಂದ ಮಾನ್ಯತೆ ಪಡೆದಿರುವ ಕಾಮಣ್ಣನ ಮೆರವಣಿಗೆ ಇಸ್ಲಾಂಪುರಿ ಗಲ್ಲಿ ಇನ್ನೂಳಿದ ಮೆರವಣಿಗೆಗಳು ವಿವಿಧ ಗಲ್ಲಿಗಳಲ್ಲಿ ಮೂರ್ತಿಗಳನ್ನು ಪೂಜಿಸಲ್ಪಡುತ್ತಾರೆ.  

ಈ ಸಂದರ್ಭದಲ್ಲಿ ವಿವಿಧ ಕಲಾವಿದರಿಂದ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿರುತ್ತದೆ.