ಎಪಿಎಂಸಿಗೆ ಪ್ರಭಾರ ಅಧ್ಯಕ್ಷರಾಗಿ ಕಮಲವ್ವ ಪಾರ್ವತೇರ ಆಯ್ಕೆ

ಲೋಕದರ್ಶನವರದಿ

ರಾಣೇಬೆನ್ನೂರು: ಇಲ್ಲಿನ ವಾಣಿಜ್ಯ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾಗಿದ್ದ, ಕಮಲವ್ವ ಚನ್ನಬಸಪ್ಪ ಪಾರ್ವತೇರ ಅವರು ಶನಿವಾರ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪ್ರಸ್ತುತ ಪ್ರಭಾರ ಅಧ್ಯಕ್ಷರಾಗಿರುವ ಕಮಲವ್ವ ಪಾರ್ವತೇರ ಅವರು ಅಸುಂಡಿ ಗ್ರಾಮದವರಾಗಿದ್ದು,  ಕಾಕೋಳ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. 

     ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಭಾರ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದಾರೆ. 

ಈ ಹಿಂದೆ ಹಲಗೇರಿ ಕ್ಷೇತ್ರದ ಸಿದ್ದಲಿಂಗಪ್ಪ ಕುಡಗೋಲ ಅವರು ಅಧ್ಯಕ್ಷರಾಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಾರ್ವತೇರ ಅವರು ಅಧ್ಯಕ್ಷರಾಗಿದ್ದಾರೆ.

    ಕಛೇರಿ ಭವನದಲ್ಲಿ ಸರ್ವ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ನೂತನ ಅಧ್ಯಕ್ಷರಿಗೆ ಸಿದ್ದಲಿಂಗಪ್ಪ ಅವರು ಸ್ವಾಗತಿಸಿ, ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಮಾರುಕಟ್ಟೆ ಸಮಿತಿಯ ಸದಸ್ಯರಾದ  ಜಟ್ಟೇಪ್ಪ ಕರೇಗೌಡ್ರ, ಬಸವರಾಜ ಹುಲ್ಲತ್ತಿ, ರಮೇಶ ನಾಯಕ್, ರಾಜೇಂದ್ರ ಬಸೇನಾಯ್ಕರ್, ಶಂಕ್ರಣ್ಣ ಕಡೂರ, ಮಂಜನಗೌಡ ಪಾಟೀಲ,  ಬಸವರಾಜ ಸವಣೂರ, ಪ್ರಕಾಶ ಕೆರೂಡಿ, ಎಂ.ಬಿ.ಬಾಳನಗೌಡ್ರ, ಗುರುನಗೌಡ ಹೊಟ್ಟಿಗೌಡ್ರ, ಇಕ್ಬಾಲ್ಸಾಬ್ ರಾಣೇಬೆನ್ನೂರು, ಪುಟ್ಟಪ್ಪ ಪಾರ್ವತೇರ, ಕೆ.ಸಿ.ಸಿ.ಸಿ ನಿದರ್ೇಶಕ ಬಿ.ಐ.ಪಾಟೀಲ, ರಾಮನಗೌಡ ಚೆನ್ನಗೌಡ್ರ, ಬಸನಗೌಡ ಪಾಟೀಲ, ಕಾರ್ಯದಶರ್ಿ ಕೆ.ಎಂ.ನಾಗೇಶ, ಸಹಾಯಕ ಕಾರ್ಯದಶರ್ಿ ಬಿ.ಎಸ್.ಗೌಡರ, ಎಂ.ಎನ್.ಬೆಣ್ಣಿ, ಎ.ಕೆ.ಮಲ್ಲಿಕಾಜರ್ುನ, ಮಾರುಕಟ್ಟೆ ಮೇಲ್ವಿಚಾರಕರಾದ ಪರಮೇಶ್ವರಪ್ಪ ನಾಯಕ, ಎನ್.ಮಂಜುನಾಥ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.