ರಾಣೆಬೆನ್ನೂರು 14: ಜನತಾ ಬಜಾರ್ ದುರ್ಗಾ ಸರ್ಕಲ್ ಬಳಿ ಗುರುವಾರ ಮುಂಜಾನೆ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಸಂಘ ಪರಿವಾರ ಮತ್ತು ಅಖಂಡ ಹಿಂದೂ ಸಮಾಜದ ಸಂಯುಕ್ತ ಆಶ್ರಯದಲ್ಲಿ, ಉತ್ಸವ ಸಮಿತಿಯಯು ವಾರ್ಷಿಕ ಸಂಪ್ರದಾಯದ ಕಾಮ -ರತಿ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಮುಖಂಡರಾದ ವೆಂಕಟೇಶ್ ಏಕಬೋಟೆ, ಪ್ರಕಾಶ್ ಮಣೇಗಾರ, ರಮೇಶ್ ಮಾಕನೊರ, ವಿನಯಗೌಡ ಬಾಳನ ಗೌಡ್ರು, ದೇವರಾಜ್ ಎನ್. ರಮೇಶ ಪಾಟೀಲ್, ರಾಯಣ್ಣ ಮಾಕನೂರ, ಹಾಗೂ ಸರ್ವ ಹಿಂದೂ ಸಮಾಜದ ಮುಖಂಡರು ಸಮಿತಿಯ ಸದಸ್ಯರು ಮತ್ತಿತರ ಗಣ್ಯರು, ಯುವಕರು ಉಪಸ್ಥಿತರಿದ್ದರು.