ಧುಳಗನವಾಡಿಯಲ್ಲಿ ಕಲ್ಯಾಣ ಸಿದ್ದೇಶ್ವರ ಜಾತ್ರೆ

Kalyana Siddeshwara fair in Dhulaganwadi

ಚಿಕ್ಕೋಡಿ 19: ಸಮೀಪದ ಧುಳಗನವಾಡಿಯ 60ನೇ ಶ್ರೀ ಕಲ್ಯಾಣ ಸಿದ್ದೇಶ್ವರ ಜಾತ್ರೆಯನ್ನು 22 ಮಾರ್ಚರಿಂದ 30 ರ ವರೆಗೆ ಆಯೋಜಿಸಿಲಾಗಿದೆ.  

ಶ್ರೋ.ಬ್ರ.ನಿ ಸದ್ಗುರು ಬಸವಪ್ರಬು ಮಹರಾಜರ ದಿವ್ಯ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ 22ರಿಂದ ಐದು ದಿನಗಳವರೆಗೆ ಕಂಕಣವಾಡಿಯ ಪ್ರಖ್ಯಾತ ಪ್ರವಚನಕಾರರಾದ ಮಾರುತಿ ಶರಣರಿಂದ ಪ್ರವಚನ ಜರುಗುವದು. 26 ರಂದು ಪ್ರವಚನ ಮಂಗಲಕಾರ್ಯಕ್ಕೆ ಖಡಕಲಾಟದ ಅಪ್ಪನವರ ಕುಮಾರೇಶ್ವರ ವಿರಕ್ತ ಮಠದ ಮ.ನಿ.ಪ್ರ ಶಿವಬಸವ ಸ್ವಾಮಿಗಳು ನೀದರೋಳ್ಳಿಯ ಸಿದ್ದೇಶ್ವರದ ಮಠದ ಮ.ನಿ.ಪ್ರ ಸಿದ್ದಲಿಂಗ ಶಿವಯೋಗಿ ಮಹಾಸ್ವಾಮಿಗಳು ಜೋಡಕುರಳಿಯ ಶ್ರೀ ಸಿದ್ದಾರೂಢ ಸ್ವಾಮಿ ಮಠದ ಸ್ಚಿದಾನಂದ ಭಾರತಿ ಮಹಾಸ್ವಾಮಿಗಳು ಹಾಗೂ ಸ್ಥಳೀಯ ಚನ್ನಮಲ್ಲಯ್ಯಾ ಮಠಪತಿ ಸ್ವಾಮಿಗಳು ಆಗಮಿಸುವರು ಜಾತ್ರೆ ಅಂಗವಾಗಿ ದಿ. ಮಾರ್ಚ 27 ರಂದು ರಾಜ್ಯಮಟ್ಟದ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳು ಆಯೋಜಿಸಿಲಾಗಿದೆ.  

ಸಿದ್ದೇಶ್ವರ ವೈಭವದ ಪಲಕ್ಕಿ ಮೆರವಣಿಗೆ ದಿನಾಲೂ ಸಂಜೆ ಸ್ಥಳೀಯ ಶ್ರೀ ಬಸವೇಶ್ವರ ಭಜನಾ ತಂಡದಿಂದ ಭಜನಾಪದ ಸೇವೆ ಹಾಗೂ  ವಾರಕರಿ ದಿಂಡಿಮಹೋತ್ಸವ  ಹಾಗೂ ವಿವಿಧ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರಾದ ಅಪ್ಪಾಸಾಹೇಬ ಪಾ ಕಮತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.