ಲೋಕದರ್ಶನ ವರದಿ
ಹೂವಿನಹಡಗಲಿ : ಶ್ರಾವಣ ಮಾಸದ ಹಿನ್ನಲೆಯಲ್ಲಿ ತಾಲೂಕಿನ ಇಟ್ಟಿಗಿ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಗೆ ನಿತ್ಯ ರುದ್ರಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ 16 ವರ್ಷಗಳಿಂದ ಸಿ.ಮ.ಗುರುಬಸವರಾಜ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು ಲೋಕ ಕಲ್ಯಾಣಾರ್ಥವಾಗಿ ಈ ರುದ್ರಾಭಿಷೇಕ ನಡೆಯುತ್ತಿರುತ್ತದೆ. ನಿತ್ಯ ಶತನಾಮಾವಳಿ, ಬಿಲ್ವಾರ್ಚನೆ, ಮಹಾಮಂಗಳರಾತಿ ನಡೆಸಲಾಗುತ್ತಿದೆ.
11 ಸೆಪ್ಟಂಬರ್ 2018ರ ವರೆಗೂ ಈ ರುದ್ರಾಭಿಷೇಕ ನಡೆದು 11 ಸೆಪ್ಟಂಬರರಮದು ಉಜ್ಜಯನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಮಂಗಲವಾಗಲಿದೆ ಎಂದು ಶ್ರೀ ಕಲ್ಲೇಶ್ವರ ಯುವ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಕೆ.ಜಗದೀಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದಶರ್ಿ ಎ.ನವೀನಕುಮಾರ, ಖಜಾಂಚಿ ಮಲ್ಲಿಕಾಜರ್ುನ, ಉಪಾಧ್ಯಕ್ಷ ಗೂಳಜ್ಜ ಮತ್ತಿತರರು ಹಾಜರಿದ್ದರು.