ಕಲ್ಲಪ್ಪಣ್ಣ ಆವಾಡೆ ಇಂಚಲಕರಂಜಿ ಜನತಾ ಬ್ಯಾಂಕ್ ಐತಿಹಾಸಿಕ ದಾಖಲೆ : ಸ್ವಪ್ನಿಲ್ ಆವಾಡೆ

Kallappanna Awade Inchalakaranji Janata Bank Historical Record : Swapnil Awade

ಲೋಕದರ್ಶನ ವರದಿ 

ಕಲ್ಲಪ್ಪಣ್ಣ ಆವಾಡೆ ಇಂಚಲಕರಂಜಿ ಜನತಾ ಬ್ಯಾಂಕ್ ಐತಿಹಾಸಿಕ ದಾಖಲೆ : ಸ್ವಪ್ನಿಲ್ ಆವಾಡೆ 

ಹಾರೂಗೇರಿ : ಕಲ್ಲಪ್ಪಣ್ಣ ಆವಾಡೆ ಇಂಚಲಕರಂಜಿ ಜನತಾ  ಬ್ಯಾಂಕಿನ ಸದಸ್ಯರು, ಠೇವಣಿದಾರರು, ಸಾಲಗಾರರು ಮತ್ತು ಗ್ರಾಹಕರ ಅಮೂಲ್ಯವಾದ ಸಹಕಾರ ಮತ್ತು ವಿಶ್ವಾಸದಿಂದಾಗಿ 2024-25ರ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ 4708ಕೋಟಿ ರೂ, 2862ಕೋಟಿ ಠೇವಣಿ ಮತ್ತು 1846ಕೋಟಿ ಸಾಲ ವಿತರಿಸಿ, 55ಕೋಟಿ ರೂ. ಲಾಭ ಗಳಿಸಿದೆ. ಪ್ರಸಕ್ತ ವರ್ಷ 0ಅ ನಿವ್ವಳ ಎನ್‌ಪಿಎಯ ಕನಸನ್ನು ಸಾಧಿಸುವಲ್ಲಿ ಬ್ಯಾಂಕ್ ಯಶಸ್ವಿಯಾಗಿದೆ ಎಂದು ಬಾಂಕ್ ಅಧ್ಯಕ್ಷ ಸ್ವಪ್ನಿಲ್ ಆವಾಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

   ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ ಸೇರಿ ಒಟ್ಟು 54 ಶಾಖೆಗಳನ್ನು ಹೊಂದಿದ್ದು, ಮಾಜಿ ಸಂಸದ ಹಾಗೂ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಕಲ್ಲಪ್ಪಣ್ಣ ಆವಾಡೆ ಹಾಗೂ ಶಾಸಕರಾದ ಪ್ರಕಾಶ ಆವಾಡೆ ಅವರ ಅಮೂಲ್ಯ ಮಾರ್ಗದರ್ಶನದಲ್ಲಿ ಬ್ಯಾಂಕ್ ಇಂದು ಸ್ಪೂರ್ತಿದಾಯಕ ಪ್ರಗತಿ ಸಾಧಿಸಿದೆ. ಬ್ಯಾಂಕ್‌ಗಳ ನಡುವಿನ ಬಡ್ಡಿದರಗಳ ತೀವ್ರ ಪೈಪೋಟಿ ನಡುವೆಯೂ ಬ್ಯಾಂಕ್ ತನ್ನ ಪ್ರಗತಿಯ ಛಾಪನ್ನು ಉಳಿಸಿಕೊಂಡಿದೆ. ಬ್ಯಾಂಕಿನ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿಗಳ ಅವಿರತ ಪ್ರಯತ್ನದ ಫಲವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ನಿವ್ವಳ ಎನ್‌ಪಿಎಗಳ ಅನುಪಾತ ಕಡಿಮೆಯಾಗಿದೆ. ಬ್ಯಾಂಕ್‌ನ 0ಅ ನಿವ್ವಳ ಎನ್‌ಪಿಎ ಬ್ಯಾಂಕಿನ ಹಲವು ವರ್ಷಗಳ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಮಾಡಿದೆ.  

   ಬ್ಯಾಂಕಿನ ಒಟ್ಟು ಸಾಲದ ಶೇ.50ರಷ್ಟು ಸಣ್ಣ ಉದ್ದಿಮೆದಾರರು ಮತ್ತು ಸಣ್ಣ ಸಾಲಗಾರರಿಗೆ 25ಲಕ್ಷದವರೆಗೆ ಹೆಚ್ಚಿಸಿ, ಸಾಲ ವಸೂಲಾತಿಯಲ್ಲಿ ನೀರೀಕ್ಷಿತ ಗುರಿಯನ್ನು ತಲುಪಿದೆ. ಅಷ್ಟೇ ಅಲ್ಲದೇ ಸಮಾಜದ ಪ್ರತಿಯೊಂದು ವರ್ಗದವರಿಗೂ ಸಾಲ ಯೋಜನೆಗಳ ಪ್ರಯೋಜನವನ್ನು ಪಡೆಯುವ ಉದಾತ್ತ ಉದ್ದೇಶದಿಂದ ಬ್ಯಾಂಕ್ ಕೇಂದ್ರ ಸರ್ಕಾರದ ಹೊಸ ಯುವ ಉದ್ಯಮಿಗಳನ್ನು ಪ್ರೇರೆಪಿಸಲು ಪ್ರಧಾನಮಂತ್ರಿ ರೋಜ್‌ಗಾರ ನಿರ್ವಾಣ ಯೋಜನೆ(ಪಿಎಂಇಜಿಪಿ) ಹಾಗೂ ಅಣ್ಣಾಸಾಹೇಬ ಪಾಟೀಲ ಆರ್ಥಿಕವಾಗಿ ಹಿಂದುಳಿದ ಅಭಿವೃದ್ಧಿ ನಿಗಮದ ಮೂಲಕ ಮರಾಠಾ ಸಮುದಾಯದ ಉದ್ಯಮಿಗಳ ಅಭಿವೃದ್ಧಿ ನಿಗಮ, ವಸಂತರಾಸ್ಟಿಕ್ ವಿ. ಹಿಂದುಳಿದ ವರ್ಗ, ವೀರಶೈವ ಲಿಂಗಾಯತ ಸಮಾಜ, ಬ್ಯಾಂಕಿನ ಅಧ್ಯಕ್ಷ ಸ್ವಪ್ನಿಲ್ ಆವಾಡೆ ಅವರ ಸಂತ ಕಾಶಿಬ ಗುರವ ಯುವ ಆರ್ಥಿಕ ಅಭಿವೃದ್ಧಿ ನಿಗಮದ ಮೂಲಕ ಜಗಜ್ಯೋತಿ ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ, ಗುರವ ಸಮಾಜದ ಉದ್ಯಮಿಗಳಿಗೆ ವಯಕ್ತಿಕ ಸಾಲದ ಬಡ್ಡಿ ಮರುಪಾವತಿ ಯೋಜನೆಗಳಂತಹ ವಿವಿಧ ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದ್ದಾರೆ.  

  ಕಲ್ಲಪ್ಪಣ್ಣ ಆವಾಡೆ ಇಂಚಲಕರಂಜಿ ಜನತಾ  ಬ್ಯಾಂಕ್ ಭಾರತೀಯ ರಿಸರ್ವ್‌ ಬ್ಯಾಂಕ್ ನೀಡಿದ ಸೂಚನೆಗಳನ್ನು ಸಮರ​‍್ಕವಾಗಿ ಅನುಸರಿಸಿದೆ ಎಂದ ಅವರು ಬ್ಯಾಂಕ್ ಮೇಲೆ ಠೇವಣಿದಾರರ ನಂಬಿಕೆ, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ್ದರಿಂದ ಬ್ಯಾಂಕ್ ಐತಿಹಾಸಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಬ್ಯಾಂಕಿನ ಠೇವಣಿದಾರರು, ಸಾಲಗಾರರು, ಸದಸ್ಯರು ಮತ್ತು ಗ್ರಾಹಕರಿಗೆ ಬಾಂಕ್ ಅಧ್ಯಕ್ಷ ಸ್ವಪ್ನಿಲ್ ಆವಾಡೆ ಅವರು ಧನ್ಯವಾದ ತಿಳಿಸಿದರು. 

  ಬ್ಯಾಂಕ್ ಬಿ. ಅಧ್ಯಕ್ಷ ಸಿಎ ಸಂಜಯಕುಮಾರ ಅನಿಗೋಳ, ಆಡಳಿತ ಮಂಡಳಿ ಅಧ್ಯಕ್ಷ ಸಿಎ ಚಂದ್ರಕಾಂತ ಚೌಗುಲೆ, ಮಹೇಶ ಸತ್ಪುಟೆ, ಬಂದೋಪಂತ್ ಲಾಡ್, ರಮೇಶ ಪಾಟೀಲ, ಶೈಲೇಶ ಕಿತ್ತೂರೆ, ಬಾಲಕೃಷ್ಣ ಪಾವ್ಲೆ, ದ್ವಾರಕಾಧೀಶ ಶಾರದ, ಶೈಲೇಶ ಗೋರೆ, ಸುಭಾಷ ಜಾಧವ, ಬಾಬುರಾವ ಪಾಟೀಲ, ತಾತ್ಯಾಸಿ ಅಠಾಣೆ, ಅವಿನಾಶ ಕಾಂಬಳೆ, ಸಾರಂಗ ಜೋಶಿ, ಆಡಳಿತ ಮಂಡಳಿ ಸದಸ್ಯರಾದ ರಾಜು ಚವ್ಹಾಣ, ಯೋಗೀಶ ಪಾಟೀಲ, ಸಚೀನ ದೇವುರಕರ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ ಶಿರಗಾವೆ, ಪ್ರಧಾನ ವ್ಯವಸ್ಥಾಪಕ ಕಿರಣ ಪಾಟೀಲ, ದೀಪಕ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.