ಕಲಾವತಿ ದೇವಿಯ ವಾಷರ್ಿಕ ಸಪ್ತಾಹ ಸಮಾರೋಪ

5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು

ಮಾಂಜರಿ 02: ಯಕ್ಸಂಬಾ ಪಟ್ಟಣದ ದತ್ತ ಮಂದಿರದಲ್ಲಿ ಸಿದ್ಧಕಲಾ ಮಹಿಳಾ ಭಜನಾ ಮಂಡಳದ ವತಿಯಿಂದ 5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.

ಧನಶ್ರೀ ಮುತಾಲಿಕ ಕಲಾವತಿದೇವಿಯ ಭಾವಚಿತ್ರದ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಐದು ದಿನಗಳ ಕಾಲ ಮುಂಜಾನೆಯಿಂದ ಸಾಯಂಕಾಲದ ವರೆಗೆ ಭಜನೆ, ಕಿರ್ತನೆ, ಉಪನ್ಯಾಸ, ಬಾಲೋಪಸನಾ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. 

ವೈಭವ ಕಾಂದೆಕರ, ವೈಜಯಂತಿ ಮುತಾಲಿಕ, ಸುಧಾ ಹುಕ್ಕೇರಿ, ಆರತಿ ಪೋತದಾರ, ಸುಜಾಜಾ ಮಾಳಿ, ಜೋತಿ ದೇಸಾಯಿ, ಪೂಜಾ ಇಂಗಳೆ, ಅನೂಜಾ ದೇಸಾಯಿ, ದೀಪಾ ಟಾಕಳೆ, ರಾಣಿ ದೇಸಾಯಿ ಸೇರಿದಂತೆ ಸಿದ್ಧಕಲಾ ಮಹಿಳಾ ಭಜನಿ ಮಂಡಳದ ಸದಸ್ಯರು, ಮಹಿಳೆಯರು, ಯುವತಿಯರು ಪಾಲ್ಗೊಂಡಿದ್ದರು