ಯಶಸ್ವಿಯಾಗಿ ಜರುಗಿದ ಕಳಸಾರೋಹನ ಸಮಾರಂಭ
Kalasarohana ceremony successfully held
ಯಮಕನಮರಡಿ 18: ಸಮೀಪದ ದಾದಾಬಾನಹಟ್ಟಿ ಗ್ರಾಮದ ಜಾಗೃತ ದೇವತೆ ಶಕ್ತಿ ಸ್ವರೂಪಿಣಿ ಆದ ಶ್ರೀ ಲಕ್ಷ್ಮಿ ದೇವಿ ಮಂದಿರದ ನೂತನ ಶಿಖರದ ಕಳಸಾರೋಹಣ ಸಮಾರಂಭ ಯಶಸ್ವಿಯಾಗಿ ದಿನಾಂಕ 18 ರಂದು ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹತ್ತರಗಿ ಕಾರಿಮಠದ ಪೂಜ್ಯರಾದ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಯಮಕನಮರಡಿ ಹತ್ತರಗಿ ಹರಿಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ವಹಿಸಿ ಕಳಸ ಪೂಜೆ ನೆರವೇರಿಸಿ ಹೋಮ ಹವನ ಇತ್ಯಾದಿ ಕಾರ್ಯಕ್ರಮಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತ್ಯಪ್ಪ ಜಮಕೋಳಿ, ಉಪಾಧ್ಯಕ್ಷ ನಾರಾಯಣ ಪವಾರ, ಕಾರ್ಯದರ್ಶಿ ಮಂಜುನಾಥ್ ಓಮನವರ್, ಖಜಾಂಚಿ ಈರಣ್ಣ ಕ ಘಸ್ತಿ, ಸದಸ್ಯರಾದ ಲಗಮಣ್ಣ ಜಮಕೋಳಿ, ರಮೇಶ್ ಡೊಳ್ಳಿ, ಮಹಾದೇವ ಢಂಗ, ವಸಂತ ಗಸ್ತಿ, ಬಸವರಾಜ ಗಸ್ತಿ, ಪರಸಪ್ಪ ಶಿರನಗಿ, ಅಜ್ಜಪ್ಪ ಅತ್ಯಾಳಿ, ಲಗಮಣ್ಣ ಬರಗಾಲಿ, ಜಗದೀಶ ಪವಾರ್, ಭೀಮಪ್ಪ ಚನ್ನಬಸವಣ್ಣವರ , ಮಲ್ಲಪ್ಪ ಮಜತಿ, ರವೀಂದ್ರ ಗಸ್ತಿ, ನಾಗೇಂದ್ರ ಮಜತಿ, ಈರಪ್ಪಣ್ಣ ಘಸ್ತಿ ಹಾಗೂ ಗ್ರಾಮದ ಸಕಲ ಭಕ್ತಾದಿಗಳು ಹತ್ತರಿಗಿಯಿಂದ ಬಂದಿರುವ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದು ಕಳಸಾರೋಹಣ ನೆರವೇರಿಸುವಲ್ಲಿ ಯಶಸ್ವಿಯಾದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 