ಬೆಳಗಾವಿ 11: ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್.,ನೋಂದಾಯಿತ ಆಡಳಿತ ಕಛೇರಿ ಸಿಟಿಎಸ್ ನಂ.704,705 ರವಿವಾರಪೇಟ್ ಬೆಳಗಾವಿ ಬ್ಯಾಂಕಿನ ಅಧ್ಯಕ್ಷರಾಗಿ ರಮೇಶ ಎಮ್. ಕಳಸಣ್ಣವರ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕೆ. ಪಾಟೀಲ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು ಭರ್ತಿ ಮಾಡಲು ಶನಿವಾರ ದಿನಾಂಕ 11 ನೇ ಜನೇವರಿ 2025 ರಂದು ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಕರೆದ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಶ್ರೀ ಜಬಿವುಲ್ಲಾ ಕೆ. ಸಹಾಯಕ ನಿಬಂಧಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಬೆಳಗಾವಿ ಹಾಗೂ ರಿಟರ್ನಿಂಗ ಅಧಿಕಾರಿ ಬೆಳಗಾವಿ ಶ್ರೀ ಬಸವೇಶ್ವರ ಕೋ- ಆಪರೇಟಿವ ಬ್ಯಾಂಕ ಲಿ., ಬೆಳಗಾವಿ ಇವರು ಕೈಗೊಂಡರು. ಈ ಸಂದರ್ಭಧಲ್ಲಿ ಸಹಾಯಕ ರಿಟರ್ನಿಂಗ ಅಧಿಕಾರಿಗಳಾದ ಸಮೀರ ಮೀರಜಕರ ಇವರು ಹಾಜರಿದ್ದರು. ರಮೇಶ ಮಹಾರುದ್ರಾಪ್ಪ ಕಳಸಣ್ಣವರ ಇವರು ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಹಾಗೂ ಸತೀಶ ಕಲಗೌಡ ಪಾಟೀಲ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನೂತನವಾಗಿ ಆಯ್ಕೆಯಾದ ಬ್ಯಾಂಕಿನ ಪದಾಧಿಕಾರಿಗಳನ್ನು ರಿಟರ್ನಿಂಗ ಅಧಿಕಾರಿಗಳಾದ ಜಬಿವುಲ್ಲಾ ಕೆ. ಇವರು ಹಾಗೂ ಸಹಾಯಕ ರಿಟರ್ನಿಂಗ ಅಧಿಕಾರಿಗಳಾದ ಸಮೀರ ಮೀರಜಕರ ಇವರು ಅಭಿನಂದಿಸಿದರು. ಅದೇ ರೀತಿ ಬ್ಯಾಂಕಿನ ನಿರ್ದೇಶಕರುಗಳಾದ ಬಿ.ಬಿ.ಕಗ್ಗಣಗಿ, ವಿ.ಸಿ.ಅಂಗಡಿ, ಪಿ.ಎಮ್.ಬಾಳೇಕುಂದ್ರಿ. ಆರ್.ಎಸ್.ಸಿದ್ದಣ್ಣವರ. ಬಿ.ವಿ. ಝೆಂಡ, ಬಿ. ವಿ. ಉಪ್ಪಿನ, ಎಸ್.ಎಸ್.ಹೇರೆಕರ, ಜಿವಿ.ಬಾಗಿ, ಬಿ. ವಿ. ಬಾಗಿ. ಜೆ.ಎಸ್.ಖಡಬಡಿ, ಪಿ.ಎ.ಹುಕ್ಕೇರಿ, ಸಿ.ಎಚ್. ಕಟ್ಟಿಮನಿ, ಆರಿ್ಬ.ಕಾಳೇನಟ್ಟಿ ಮತ್ತು ಜನರಲ್ ಮ್ಯಾನೇಜರ ಎಸ್.ಎಸ್ ವಾಲಿ ಹಾಗೂ ಸಿಬ್ಬಂದಿ ವರ್ಗದವರು ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮಾತನಾಡಿ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುವುದಾಗಿ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದಾಗಿ ತಿಳಿಸಿದರು.
ಕೊನೆಗೆ ಜನರಲ್ ಮ್ಯಾನೇಜರರಾದ ಎಸ್. ಎಸ್. ವಾಲಿ ಇವರಿಂದ ವಂದನಾರ್ಪಣೆಯೊಂದಿಗೆ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಂಡಿತು.