ಕಲಖಾಂಬ ನಾಗದೇವತಾ ಜಾತ್ರೆ 17ರಂದು

ಕಲಖಾಂಬ ನಾಗದೇವತಾ ಜಾತ್ರೆ 17ರಂದು Kalakhamba Nagadevata Jatra on the 17th


       ಬೆಳಗಾವಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅನುಮತಿ ಮೇರೆಗೆ ನಿರ್ಮಿಸಿದ ಕಲಖಾಂಬ ನಾಗದೇವತಾ ದೇವಸ್ಥಾನದ ಜಾತ್ರೆ ಆಗಸ್ಟ 17ರಂದು ಸೋಮವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ದಿನಾಂಕ: 17ರಂದು ದೇವಿಗೆ ಉಡಿ ತುಂಬುವುದು, ಅಭಿಷೇಕ, ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ಕಾರ್ಯಕ್ರಮ ನಡೆಯಲಿದೆ.ಪ್ರತಿ ದೇವಸ್ಥಾನ ನಿರ್ಮಾಣಕ್ಕೆ ಒಂದು ಹಿನ್ನೆಲೆ ಇರುವ ಹಾಗೇ ಕಲಖಾಂಬ ಗ್ರಾಮದ ಶ್ರೀ ನಾಗದೇವತಾ ದೇವಸ್ಥಾನಕ್ಕೂ ಒಂದು ಹಿನ್ನೆಲೆ ಇದೆ. 


       ಬೈಲಹೊಂಗಲ ತಾಲೂಕಿನ ಹಣಬರಟ್ಟಿ ಗ್ರಾಮದ ಪ್ರಕಾಶ ಬಸಪ್ಪ ಪವಾಡಿ ಇವರು 2013 ರಲ್ಲಿ ಕಲಖಾಂಬದಲ್ಲಿ ನಿವೇಶನ ತೆಗೆದುಕೊಂಡು ಮನೆ ನಿರ್ಮಿಸಿದರು. ಒಂದು ವರ್ಷದ ನಂತರ ಅವರ ಪುತ್ರ ಲಕ್ಷ್ಮೇಶನ ಜನನವಾಗುತ್ತದೆ. ಹುಟ್ಟಿನಿಂದ ಪುತ್ರ ಲಕ್ಷ್ಮೇಶನಿಗೆ ಚರ್ಮರೋಗದ ಖಾಯಿಲೆ ಆರಂಭವಾಗುತ್ತದೆ. ಹಾವಿನ ಪರಿ ಮಾದರಿಯಲ್ಲಿ ಕಾಲುಗಳಿಗೆ ಬಾಧೆ ಉಂಟಾಗುತ್ತದೆ. ಸರ​‍್ಗಳು ಆಗಾಗ ಕಾಣಿಸಿಕೊಳ್ಳಲು ಆರಂಭಿಸುತ್ತವೆ. 


       ಬೆಳಗಾವಿ ಮುಂಬೈ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ತೋರಿಸಿದರೂ ಆ ಚರ್ಮ ಖಾಯಿಲೆ ವಾಸಿಯಾಗುವುದಿಲ್ಲ. ಒಬ್ಬರು ಕುಕ್ಕೇ ಸುಬ್ರಹ್ಮಣ್ಣ ದೇವಸ್ಥಾನಕ್ಕೆ ನಡೆದುಕೊಂಡರೆ ವಾಸಿಯಾಗುತ್ತದೆ ಎಂಬ ಸಲಹೆ ನೀಡುತ್ತಾರೆ. ಆನಲೈನ್ ಬುಕಿಂಗ್ ಮಾಡಿಕೊಂಡು ಗಣ್ಯರಾದ ಮಹಾಂತೇಶ ಹಿರೇಮಠ ಅವರನ್ನು ಕರೆದುಕೊಂಡು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ದರ್ಶನ ತೆಗೆದುಕೊಳ್ಳುತ್ತಾರೆ. 


       ನಂತರ ಅಲ್ಲಿಯ ಆಡಳಿತ ಮಂಡಳಿಯವರಿಗೆ ಬೆಳಗಾವಿಯ ಕಲಖಾಂಬದಲ್ಲಿ ದೇವಸ್ಥಾನ ನಿರ್ಮಿಸುವ ಕುರಿತು ವಿವರಿಸುತ್ತಾರೆ. ಆಡಳಿತ ಮಂಡಳಿಯವರು ಕೆಲ ಸೂಚನೆ ನೀಡಿ ದೇವರ ಮೂರ್ತಿ ನೀಡಿ ಒಪ್ಪಿಗೆ ನೀಡುತ್ತಾರೆ. ಪ್ರಕಾಶ ಪವಾಡಿ, ಮಹಾಂತೇಶ ಹಿರೇಮಠ ಅವರು ಗಲ್ಲಿಯ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಲಖಾಂಬದಲ್ಲಿ ದೇವಸ್ಥಾನ ನಿರ್ಮಿಸುತ್ತಾರೆ. ಪುತ್ರ ಲಕ್ಷ್ಮೇಶನ ಚರ್ಮವ್ಯಾದಿ ಗುಣವಾಗುತ್ತದೆ. 


       ದೇವಸ್ಥಾನ ನಿರ್ಮಾಣಗೊಂಡ ನಂತರ ಪಂಚಮಿ ಮರುದಿನ ಕಿಚಡಿ, ಹಬ್ಬದ ದಿನ ಜಾತ್ರೆ ನೆರವೇರಿಸುತ್ತಾರೆ. ಭಕ್ತರು ದರ್ಶನ ಪಡೆದುಕೊಂಡು ಇಷ್ಟಾರ್ಥ ಪೂರೈಸುಕೊಳ್ಳುತ್ತಿದ್ದಾರೆ. ದೇವಸ್ಥಾನ ಬೆಳಗಾವಿ ಕಣಬರ್ಗಿ ಹೊರವಲಯದ ಗೋಕಾಕ ರಸ್ತೆಯ ಕಲಖಾಂಬ ಗ್ರಾಮದಲ್ಲಿರುತ್ತದೆ. ವಿವರಗಳಿಗೆ ಮೊ.ನಂ. 9686414409, 7899225587 ಗೆ ಸಂಪರ್ಕಿಸಬಹುದಾಗಿದೆ.