ಕಾಗವಾಡ: ಕಾಗವಾಡದ ಉಪಚುನಾವಣೆ ನಿಮಿತ್ಯ ಗುರುವಾರ ರಂದು ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಕಾರ್ಯ ನಡೆಯಿತು.ಇಲ್ಲಿಯ ಮತಗಟ್ಟೆಗಳಲ್ಲಿ ಸಾಮಾನ್ಯ ಮತದಾರರೊಂದಿಗೆ ದಿವ್ಯಾಂಗ ಮತದಾರರು ಉತ್ಸಾಹದಿಂದ ಮತಚಲಾಯಿಸಿದರು.ಮತದಾನ ದಿನದಂದುಮಳೆ ಬಾರದೆಯಿದಿದ್ದ ರಿಂದ ಮತದಾರರಿಗೆ ತೊಂದರೆ ಯಾಗಲಿಲ್ಲಾಯೆಂದು ಗುಜರಾತ ರಾಜ್ಯದ ಐ.ಎ.ಎಸ್. ಅಧಿಕಾರಿ ಮತ್ತು ಕಾಗವಾಡ ವಿಧಾನಸಭಾ ಸಾಮಾನ್ಯ ವೀಕ್ಷಕರು ಸುನೀಲ ಕುಮಾರಎನ್. ಡೊಳ್ಳಿ ಕಾಗವಾಡದಲ್ಲಿ ಅಭಿಪ್ರಾಯ ಪಟ್ಟರು.
ಉಪಚುನಾವಣೆಯಲ್ಲಿ ಸಾಮಾನ್ಯ ವೀಕ್ಷಕರಾಗಿ ಕಾಗವಾಡಕ್ಷೇತ್ರದಲ್ಲಿ ಸುಕ್ಷ್ಮ, ಅತಿಸುಕ್ಷ್ಮ, ಸಾಮಾನ್ಯ ಮತಗಟ್ಟೆಗಳಿಗೆ ಭೇಟಿ ನೀಡಿಅಲ್ಲಿಯ ಸ್ಥಿತಿಗತಿ ಅವಲೋಕಿಸಿದರು.
ಕ್ಷೇತ್ರದ ಮತದಾನ ಕೇಂದ್ರಗಳಲ್ಲಿ ದಿವ್ಯಾಂಗ ಮತದಾರರು ಮತಚಲಾಯಿಸಿದರು.ಸ್ವತಂತ್ರವಾಗಿ ಸ್ಥಾಪಿಸಿದ 'ಸಖಿ' ಮತಗಟ್ಟೆಯಲ್ಲಿ ಮಹಿಳೆಯರು ಉತ್ಸಾಹದಿಂದ ಮತಚಲಾಯಿಸಿದರು.ಇದರಿಂದ ಒಂದು ರೀತಿ ಸಂತಸತಂದಿದೆಯೆಂದು ಸುನೀಲಕುಮಾರ ಹೇಳಿದರು.
ಅವರೊಂದಿಗೆ ಗುಲಬರ್ಗಾಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣಇದ್ದರು.