ಲೋಕದರ್ಶನ ವರದಿ
ಕಡಬಿ: ಗ್ರಾಮದ ಸುತ್ತಮುತ್ತಲಿ ನಿರಂತರವಾಗಿ ದಾರಾಕಾರ ಸುರಿಯುತ್ತಿರುವ ಮಳೆಯಿಂದ ಕೆರೆ, ಹಳ್ಳಗಳಿಂದ ನೀರು ಹರಿದು ಬಂದು ಕಡಬಿ ಡ್ಯಾಂ ಸಂಪೂರ್ಣ ಭತರ್ಿ ಯಾಗಿದ್ದು ನೀರು ಹೋರ ಬೀಡುವ ಗೇಟ್ ತುಕ್ಕು ಹಿಡಿದು ನೀರು ಹೋರಬೀಡಲು ಆಗದೇ ಅಲ್ಲಲಿ ಭಿರುಕು ಬೀಟ್ಟ ಸುದ್ದಿ ತಿಳಿದು ಎಚ್ಚೆತ್ತ ತಾಪಂ ಇಒ ಯಶವಂತಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮದ ಡ್ಯಾಂ ಸಂಪೂರ್ಣ ಭತರ್ಿಯಾಗಿದೆ ಇನ್ನೂ ಒಂದೆರಡು ದಿನ ಮಳೆ ಇದೆ ರೀತಿ ಸುರಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ ಅದಕ್ಕೆ ಮುನ್ನೆಚ್ಚರಕೆಯಾಗಿ ಗೇಟ್ವಾರಿ ಅಡೆತಡೆಯಾದ ಕಲ್ಲು ಮತ್ತು ಕಂಟಿಗಳನ್ನೂ ಸ್ವಚ್ಚಗೋಳಿಸಲಾಯಿತು.
ಹೆಚ್ಚಿನ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ, ತಕ್ಷಣ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಎಂದು ಪಿಡಿಒಗೆ ಇಒ ಸೂಚಿಸಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಮನೆಗಳ ಗೋಡೆ ಕುಸಿದಿವೆ. ಹೋಲದಲ್ಲಿನ ಬದುವು ಒಡೆದು ಬೆಳೆಹಾನಿಯಾಗಿದ್ದನ್ನು ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಸಂದರ್ಭದಲ್ಲಿ ಪಿಡಿಒ ಸುವರ್ಣಗೌರಿ ಕೊಣ್ಣೂರ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.