ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.29 ರ ಬುಧವಾರ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟದಲ್ಲಿ ಬೀರಪ್ಪ ಅಂಡಗಿ ನಾಯಕತ್ವದ ಕಬ್ಬಡ್ಡಿ ತಂಡ ಪ್ರಥಮ ಪಡೆದಿದೆ.
ಕಬ್ಬಡ್ಡಿ ಸ್ಪರ್ಧೆಯಲ್ಲಿ ಕೊಪ್ಪಳ ಹಾಗೂ ಕುಷ್ಟಗಿ ತಂಡಗಳ ಮಧ್ಯ ಸ್ಪರ್ಧೆ ನಡೆಯಿತು.ಕೊನೆಯಲ್ಲಿ ಕೊಪ್ಪಳ ತಂಡ ಜಯ ಸಾಧಿಸಿದೆ. ಕೊಪ್ಪಳ ತಂಡದಲ್ಲಿ ಬೀರಪ್ಪ (ತಂಡ ನಾಯಕ),ಆಟಗಾರರಾಗಿ ಮಂಜುನಾಥ.ಎಚ್.,ಬಸವರಾಜ ಮಾರನಬಸರಿ, ಮಂಜುನಾಥ ಬುಲ್ಟಿ,ನಾಗಪ್ಪ ದೇವನಾಳ,ವಿರುಪಾಕ್ಷಪ್ಪ,ಅಂದಪ್ಪ ಇದ್ಲಿ ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪಡೆದ ಕೊಪ್ಪಳ ತಂಡಕ್ಕೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ.ಆರ್.ಜುಮ್ಮಣ್ಣನ್ನವರ ಹಾಗೂ ಯುವಜನ ಸೇವೆ ಮತ್ತು ಕ್ರೀಡಾಕೂಟ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ.ನಾಡಗೇರ ಬಹುಮಾನ ವಿತರಣೆ ಮಾಡಿದರು.
ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ,ಖಜಾಂಚಿ ಸುಶಿಲೇಂದ್ರರಾವ ದೇಶಪಾಂಡೆ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಖಜಾಂಚಿ ಕಾಶಿನಾಥ ಶಿರಿಗೇರಿ,ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಪಿಡ್ಡನಗೌಡ ಹಾಗೂ ಶಿಕ್ಷಕರಾದ ಯಲಪ್ಪ ಹಾಜರಿದ್ದರು.