ಬ್ಯಾಡಗಿ 18: ನ್ಯಾಶನಲ್ ಯುಥ್ ಕ್ಲಬ್ನ ಹಿರಿಯ ಕಬಡ್ಡಿ ಕ್ರೀಡಾಪಟು ಬ್ಯಾಡಗಿ ಪಟ್ಟಣದ ಕೋಳೂರ ಕ್ಯಾಂಪ್ ನಿವಾಸಿ ಬಸವರಾಜ ಹಣಗಿ (55) ಅನಾರೋಗ್ಯದ ಕಾರಣ ಜು.18 ಬುಧವಾರ ಬೆಳಗಿನ ಜಾವ ಕೊನೆಯಿಸಿರೆಳೆದರು.
ಮೃತರು ಹಲವಾರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಎಂಬತ್ತರ ದಶಕದಲ್ಲಿ ಜಿಲ್ಲೆಯ ಒಬ್ಬ ಅತ್ಯುತ್ತಮ ಕಬಡ್ಡಿ ಕ್ರೀಡಾಪಟುವಾಗಿ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿದ್ದರು. ಮೃತರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ. ಬುಧವಾರ ಮದ್ಯಾಹ್ನ ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಸಂತಾಪ: ಮೃತ ಬಸವರಾಜ ಅವರ ನಿಧನಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಬಸವರಾಜ ಶಿವಣ್ಣನವರ, ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ ಹಾಗೂ ತೀಪರ್ುಗಾರರ ಮಂಡಳಿ, ನ್ಯಾಶನಲ್ ಯುಥ್ ಕ್ಲಬ್, ಮೆಣಸಿನಕಾಯಿ ವರ್ತಕರ ಸಂಘದ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.