ಲೋಕದರ್ಶನ ವರದಿ
ರಾಮದುರ್ಗ 25: ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯ ವಿದ್ಯಾಥರ್ಿಗಳಾದ ಭರತಕುಮಾರ ಮಸಭಿನಾಳ ಹಾಗೂ ಸುಖಸಾಗರ ಚಿಮ್ಮಡ ಇವರು ಇತ್ತೀಚೆಗೆ ಛತ್ತಿಸಗಡ ರಾಜ್ಯದ ದುಗರ್ಾ ಜಿಲ್ಲೆಯ ಭಿಲಾಯಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಬ್ಬಡ್ಡಿ ಕ್ರಿಡಾಕೂಟದ ಪ್ರಾಥಮಿಕ ಶಾಲಾ (14 ವರ್ಷದೊಳಗಿನ ಬಾಲಕರ ವಿಭಾಗ) ತಂಡದಲ್ಲಿ ಭಾಗವಹಿಸಿ ಕನರ್ಾಟಕ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಕ್ವಾಟರ್ ಫೈನಲ್ನಲ್ಲಿ ದೆಹಲಿ ರಾಜ್ಯದ ವಿರುದ್ದ 13 ಅಂಕಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ನಲ್ಲಿ ಸ್ಥಳೀಯ ಛತ್ತಿಸಗಡ ರಾಜ್ಯದ ವಿರುದ್ದ ವಿರೋಚಿತ 3 ಅಂಕಗಳಿಂದ ಸೋತು ಕಂಚಿನ ಪದಕ ಜಯಿಸಿದ್ದಾರೆ.
ರಾಷ್ಟ್ರ ಮಟ್ಟದ ಕಬ್ಬಡ್ಡಿ ಕ್ರಿಡಾಕೂಟದಲ್ಲಿ ತೃತೀಯ ಸ್ಥಾನ ಪಡೆದ ಈ ವಿದ್ಯಾಥರ್ಿಗಳಿಗೆ ಮತ್ತು ತರಬೇತುದಾರ ಮಂಜುನಾಥ ಗಾಡಿವಡ್ಡರ ಅವರಿಗೆ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿದರ್ೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.