ಅಲ್ಲಮಪ್ರಭುಗೆ ಕೆಯುಡಬ್ಲೂ-್ಯಜೆ ವಿಶೇಷ ಪ್ರಶಸ್ತಿ
ವಿಜಯಪುರ 15: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ಪ್ರಶಸ್ತಿಗೆ ನಗರದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ವಿಶೇಷ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.ತೆಂಕಣ ಗಾಳಿ ಪತ್ರಿಕೆಯ ಸಂಪಾದಕರಾಗಿ ಕಳೆದ ಹಲವು ದಶಕಗಳಿಂದ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ, ಕೆಯುಡಬ್ಲೂ-್ಯಜೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಿದೆ. ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಕೆಯುಡಬ್ಲೂ-್ಯಜೆ ಪ್ರಕಟಣೆ ತಿಳಿಸಿದೆ.