ಕೆಯುಡಬ್ಲ್ಯೂಜೆ ಚುನಾವಣೆ: ನಾಮಪತ್ರ ಸಲ್ಲಿಕೆ ನ.19 ರಿಂದ ಆರಂಭ

ಕೆಯುಡಬ್ಲ್ಯೂಜೆ ಚುನಾವಣೆ: ನಾಮಪತ್ರ ಸಲ್ಲಿಕೆ ನ.19 ರಿಂದ ಆರಂಭ KUWJ elections: Nomination filing begins from November 19

ಕೆಯುಡಬ್ಲ್ಯೂಜೆ ಚುನಾವಣೆ: ನಾಮಪತ್ರ ಸಲ್ಲಿಕೆ ನ.19 ರಿಂದ ಆರಂಭ

ಗದಗ 18 : ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕಾನಿಪ) 2025-28 ನೆ ಅವಧಿಯ ಆಡಳಿತ ಮಂಡಳಿ ಆಯ್ಕೆಯಾಗಿ ಚುನಾವಣೆ  ಘೋಷಣೆಯಾಗಿದೆ.  ಗದಗ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ  ಚುನಾವಣೆ ನಡೆಯಲಿದೆ. ಅ. 13 ರಂದು ಸೋಮವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಅ. 19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.20, 21, 22 ರಂದು ದೀಪಾವಳಿ ನಿಮಿತ್ಯ ರಜೆ ಇರಲಿದೆ.ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅ.28 ನಾಮಪತ್ರಗಳ ಪರೀಶೀಲನೆ ನಡೆದು, ಅ. 30 ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿರುತ್ತದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಭಾನುವಾರ 11 ರಿಂದ 1 ಗಂಟೆ ಒಳಗಾಗಿ ಜಿಲ್ಲಾ ಪತ್ರಕರ್ತರ ಭವನದ ಚುನಾವಣಾ ಘಟಕವನ್ನು ಸಂಪರ್ಕಿಸಬಹುದು ಎಂದು ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾ ಅಧಿಕಾರಿ ಶಿವಾನಂದ ಹಿರೇಮಠ ಪ್ರಕಟಣೆ ತಿಳಿಸಿದ್ದಾರೆ.