ಬಳ್ಳಾರಿ17: ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಚಪ್ಪರದಹಳ್ಳಿ ಬಳಿ ಘಟನೆ ನಡೆದಿದೆ. ಪಟ್ಟಣದ ಕೆಎಸ್ಆರ್ಟಿಸಿ ನೌಕರ ಶಿವಪ್ರಕಾಶ (58) ಮೃತ ವ್ಯಕ್ತಿ. ಇವರು ಪಟ್ಟಣದಿಂದ ಚಪ್ಪರದಹಳ್ಳಿ ಗ್ರಾಮದ ಕಡೆ ತೆರಳಿದ್ದು, ಮರಳಿ ಕೊಟ್ಟೂರಿಗೆ ಬರುವಾಗ ಆಂಧ್ರ ಪ್ರದೇಶದ ಮಿನಿ ಲಾರಿ ಶಿವಪ್ರಕಾಶರ ಮೇಲೆ ಹರಿದಿದೆ.
ಇನ್ನು ತೀವ್ರ ಗಾಯಗೊಂಡಿದ್ದ ಅವರನ್ನು ಆ್ಯಂಬುಲೆನ್ಸ್ನಲ್ಲಿ ಕರೆ ತಂದು ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.