ಗಾಯಾಳು ರಿಷಭ್ ಪಂತ್ ಸ್ಥಾನಕ್ಕೆ ಕೆ.ಎಸ್ ಭರತ್

ಜ್ ಕೋಟ್, ಜ 17 :      ಆಸ್ಟ್ರೇಲಿಯಾ ವಿರುದ್ಧ ಇನ್ನುಳಿದ ಎರಡು ಪಂದ್ಯಗಳಿಗೆ ಗಾಯಾಳು ರಿಷಭ್ ಪಂತ್ ಅವರ ಬದಲು ಆಂಧ್ರ ಪ್ರದೇಶ ವಿಕೆಟ್ ಕೀಪರ್ ಕೆ.ಎಸ್ ಭರತ್ ಅವರನ್ನು ತುರ್ತು ವಿಕೆಟ್ ಕೀಪರ್ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಆ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು. ಸದ್ಯ ರಿಷಭ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಇಂದಿನ ಪಂದ್ಯಕ್ಕೆ ಪಂತ್ ಅಲಭ್ಯರಾಗಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಅವರ ಗಾಯದ ಪ್ರಮಾಣವನ್ನು ಆಧರಿಸಿ ತಡವಾಗಿ ಲಭ್ಯತೆ ಬಗ್ಗೆ ತಿಳಿಯಲಿದೆ.ಮೊದಲನೇ ಪಂದ್ಯದಂತೆ ಕೆ.ಎಲ್ ರಾಹುಲ್ ವಿಕೆಟ್ ಇಂದಿನ ಪಂದ್ಯದಲ್ಲಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕೆ.ಎಸ್ ಭರತ್ ಹೆಚ್ಚುವರಿ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಹೆಲ್ಮೇಟ್ ಗೆ ಚೆಂಡು ತಾಗಿತ್ತು. ಬಳಿಕ ಅವರು ಅಂಗಳದಿಂದ ಹೊರ ನಡೆದಿದ್ದರು.