ಕೆಆರ್ಡಿಎಲ್ ಕೊತ್ಪರೆ ಸ್ವೀಕರಿಸುವೆೆ: ಶಾಸಕ ಕುಮಠಳ್ಳಿ

ಲೋಕದರ್ಶನ ವರದಿ

ಅಥಣಿ 11: ಸಚಿವ ಸ್ಥಾನದ ಆಕಾಂಕ್ಷಿಯಲ್ಲಿದ್ದ ನನಗೆ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಇಲಾಖೆ (ಕೆಆರ್ಐಡಿಎಲ್) ನಿಗಮದ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಮಾತ್ರ ಸ್ವೀಕರಿಸುತ್ತೇನೆ ಹೊರತು ಎಮ್.ಎಸ್.ಐ.ಎಲ್ ನಿಗಮದ ಜವಾಬ್ದಾರಿ ಬೇಡ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಮಂಜೂರಾದ ಅಥಣಿ ಪಟ್ಟಣದಿಂದ ಹೊಸಟ್ಟಿ ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.  

      ಉಪ ಚುನಾವಣೆಯ ಪ್ರಚಾರಕ್ಕೆ ಅಥಣಿ ಕ್ಷೇತ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯುರಪ್ಪನವರು ಅನೇಕ ಪ್ರಚಾರ ಸಭೆಗಳಲ್ಲಿ ಚುನಾವಣೆಯ ನಂತರ ನನ್ನನ್ನು ಸಚಿವನನ್ನಾಗಿ ಮಾಡುತ್ತೇನೆ ಎಂದು ಮತದಾರರಿಗೆ ಮಾತು ಕೊಟ್ಟಿದ್ದರು ಆದರೆ ಕೆಲ ಅನಿವಾರ್ಯ ಕಾರಣಗಳಿಂದ ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ನಿಶ್ಚಿತವಾಗಿಯೂ ಸಚಿವಸ್ಥಾನ ಕಲ್ಪಿಸಿಕೊಡುವುದಾಗಿ ಸಿಎಮ್ ಯಡಿಯುರಪ್ಪ ಭರವಸೆ ನೀಡಿದ್ದರಿಂದ ನಾನು ಸುಮ್ಮನಾಗಿದ್ದೇನೆ ಎಂದ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆ ಸಮಯದ ವರೆಗೆ ಬಿ.ಇ.(ಸಿವ್ಹಿಲ್) ಪದವಿಧರನಾದ ನನಗೆ ಕನರ್ಾಟಕ ಗ್ರಾಮೀಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

        ನಿಗಮದಿಂದ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಸಮುದಾಯ ಭವನ, ಶಾಲಾ ಕಟ್ಟಡ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಆದರೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಅನೇಕ ಲೋಪದೋಷಗಳು ಕಂಡು ಬರುತ್ತಿವೆ ಇದರಿಂದ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ. ಇಂತಹ ಅನೇಕ ಸಮಸ್ಯೆಗಳು ಈ ನಿಗಮದಲ್ಲಿದ್ದು, ಇವುಗಳ ಸುಧಾರಣೆಗಾಗಿ ನನಗೆ ಈ ನಿಗಮದ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಂಡಿ ಎಂದು ಮನವಿ ಮಾಡಿದರು.  

ಭೂಮಿ ಪೂಜೆಯನ್ನು ಬಿಜೆಪಿ ಧುರೀಣ ಚಿದಾನಂದ ಸವದಿ ನೆರವೇರಿಸಿದರು, ಜಿ.ಪಂ ಸದಸ್ಯ ಶಿವಾನಂದ ದಿವಾನಮಳ, ಧುರೀಣರಾದ ಶ್ರೀಶೈಲ ನಾಯಿಕ,  ಅರುಣ ಭಾಸಿಂಗಿ, ನಾನಾಸಾಹೇಬ ಅವತಾಡೆ, ಶಿವರುದ್ರ ಘೂಳಪ್ಪನವರ, ಗುತ್ತಿಗೆದಾರ ಶಿವು ಸಂಕ್ರಟ್ಟಿ, ಪ್ರಧಾನ ಮಂತ್ರಿ ಸಡಕ್ ಯೋಜನೆಯ ಮುರುಘೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.