ಕೆಪಿಎಲ್ ಬಹುಕೋಟಿ ಬೆಟ್ಟಿಂಗ್ ಪ್ರಕರಣ : ಅರವಿಂದ್ ವೆಂಕಟೇಶ್ ರೆಡ್ಡಿ ವಿಚಾರಣೆ

ಬೆಂಗಳೂರು, ಅ 22: ಕೆಪಿಎಲ್ ಬಹುಕೋಟಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸಿ  ಹಾಗೂ  ದುಬೈ  ಕ್ರಿಕೆಟ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಮಂಗಳವಾರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.  

ಕೆಪಿಎಲ್ ಪಂದ್ಯಾವಳಿಗಳಲ್ಲಿ ಬೆಟ್ಟಿಂಗ್ ದಂಧೆ ನಡೆಸಿರುವ ಕುರಿತು ಶಂಕೆವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ವಿಚಾರಣೆ ನಡೆಸಿದರು. 

ಈ ಹಿಂದೆ ಬೆಳಗಾವಿ ಪ್ಯಾಂಥರ್ಸಿ  ಮಾಲೀಕ ಅಶ್ರಫ್ ಅಲಿ ಥಾರ್ ಅವರನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದು,  ಅಶ್ರಫ್ ಥಾರ್ ಮಾದರಿಯಲ್ಲೇ ಬೆಟ್ಟಿಂಗ್ ನಡೆಸಿರುವ ಶಂಕೆ ಹಿನ್ನೆಲೆಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ವಿಚಾರಣೆ ನಡೆಸಲಾಯಿತು. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ  ಬಳ್ಳಾರಿ ಟಸ್ಕರ್ಸಿ   ತಂಡದ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ,  

ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿರುವುದಾಗಿ ಹೇಳಿದರು.  

ಕೆಪಿಎಲ್ ನಲ್ಲಿ ಫಿಕ್ಸಿಂಗ್ ಯತ್ನ ನಡೆದಿತ್ತು ಎಂದು ತಮ್ಮ ತಂಡದ ಬೌಲರ್ ಭವೇಶ್ ಗುಲ್ಚಾ ದೂರು ನೀಡಿದ್ದರು. ಭವೇಶ್ ಭಾಫ್ನ ಓವರ್ ನಲ್ಲಿ ಹೆಚ್ಚು ರನ್ ಪಡೆಯುವಂತೆ ಗುಲ್ಚಾಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ಬೌಲರ್ ಭವೇಶ್ ಗುಲ್ಚಾ ದೂರು ನೀಡಿದ್ದ ಕಾರಣ ತಮಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾಗಿ ತಿಳಿಸಿದರು.  

ಭವೇಶ್ ಗುಲ್ಚಾ ಹಾಗೂ ಭವೇಶ್ ಭಾಫ್ನ ನಡುವೆ ನಡೆದ ಚಚರ್ೆಯ ಬಗ್ಗೆ  ನನಗೆ ಗೊತ್ತಿರಲಿಲ್ಲ. ಅಲ್ಲದೇ, ತಂಡದ ಕೋಚ್ ಗೂ ಈ ವಿಚಾರ ತಿಳಿದಿರಲಿಲ್ಲ, ಮಾಧ್ಯಮಗಳಲ್ಲಿ ವಿಚಾರ ವರದಿಯಾದಾಗ ಈ ವಿಷಯ ತಿಳಿಯಿತು ಎಂದರು.  

ಫಿಕ್ಸಿಂಗ್ ವಿಚಾರ ಕುರಿತು ಈಗ ತನಿಖೆ ನಡೆಯುತ್ತಿದ್ದು, ಎಲ್ಲಾ ತಂಡದ ಮಾಲೀಕರನ್ನು ಕರೆಸಲಾಗುತ್ತಿದೆ. 

ಹಾಗೆಯೇ ನನಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.  ಈಗ ವಿಚಾರಣೆ ಮುಗಿದಿದೆ. ಲಿಖಿತ ಹೇಳಿಕೆಯನ್ನು ಮಧ್ಯಾಹ್ನ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.