ಬೆಂಗಳೂರು, ಮೇ 25, ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ಕೆಪಿಸಿಸಿ ಕಿಸಾನ್ ಸೆಲ್ ವಿರೋಧ ವ್ಯಕ್ತಪಡಿಸಿದೆ.ಈ ಸಂಬಂಧ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ಮಸೂದೆಗೆ ಒಪ್ಪಿಗೆ ನೀಡಬೇಡಿ. ಇದು ರೈತ ವಿರೋಧಿ ಮಸೂದೆಯಾಗಿದೆ ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ರೈತರಿಗೆ, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಕೇಂದ್ರದ ಈ ಕಾಯಿದೆ ಅದನ್ನು ರದ್ದು ಮಾಡಲು ಹೊರಟಿದೆ. ಉದ್ಯಮಿ ಗೌತಮ್ ಅದಾನಿಗೆ ಲಾಭ ಮಾಡಲೆಂದು ಕೇಂದ್ರ ಉದ್ಯಮಿಗಳ ಪರವಾಗಿ ಕಾಯಿದೆ ತರುತ್ತಿದೆ. ಎಪಿಎಂಸಿ ಸೇರಿ ಹಲವು ಕಾಯಿದೆ ಉದ್ಯಮಿ ಪರವಾಗಿವೆ. ಕೇಂದ್ರ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಹೀಗಾಗಿ ವಿದ್ಯುತ್ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸಬಾರದು. ಇಂದು ವೇಳೆ ಒಪ್ಪಿಗೆ ನೀಡಿದರೆ ಅದರ ವಿರುದ್ಧ ರಾಜ್ಯದಲ್ಲಿ ಹೋರಾಟ ಅನಿವಾರ್ಯ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.