ಕೊಟ್ಟೂರು 28: ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಲೇಖಕರಾಗಿ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವಂತಹ ಶಶಿಧರ ಉಬ್ಬಳಗುಂಡಿಯವರನ್ನು ಹುಬ್ಬಳ್ಳಿಯ ಹೆಸರಾಂತ ಪತ್ರಿಕೆಯಾದ 'ಕರ್ನಾಟಕ ದರ್ಶನ ದ ಸೇವಾ ಅಭಿವೃದ್ಧಿ ಸಂಸ್ಥೆಯು ರಾಷ್ಟ್ರೀಯ 'ಜ್ಞಾನಭೂಷಣ' ಪ್ರಶಸ್ತಿಗೆ ಆಯ್ಕೆ ಮಾಡಿದೆ ಸಾಮಾಜಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿನ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಮೇಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಫೆ. 2ರಂದು ಗದುಗಿನ ಹೆಚ್.ಕೆ. ಪಾಟೀಲ್ ಸಭಾಭವನದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ 'ರಾಷ್ಟ್ರೀಯ ಜ್ಞಾನ ಭೂಷಣ' ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು 'ಕರ್ನಾಟಕ ದರ್ಶನ' ಸೇವಾ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಹಾಗೂ ಸಂಪಾದಕರಾದ ಎಸ್.ಎಸ್. ಪಾಟೀಲರು ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆ ಆಗಿದ್ದಕ್ಕೆ ಕೊಟ್ಟೂರಿನ ಎಲ್ಲಾ ಪತ್ರಿಕಾ ಬಳಗದವರು ಮತ್ತು ಶಶಿಧರ ಉಬ್ಬಳಗುಂಡಿಯ ಗೆಳೆಯರೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.