ಲೋಕದರ್ಶನ ವರದಿ
ಮಾಂಜರಿ ದಿ 13: ಅಷ್ಟಷರ್ಿಗಳ ಜೀವನದ ಆದರ್ಶಗಳನ್ನು ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿಕೊಡುವುದರ ಮುಖಾಂತರ ಡಾ. ಪ್ರಭಾಕರಣ್ಣಾ ಕೋರೆಯವರ ಸಚ್ಛಾರಿತ್ರ್ಯದ ಚಿತ್ರಣವನ್ನು ಸಾದರಪಡಿಸಿ ಸಂತಸದ ವಾತಾವರಣ ಹರಡಿದರು. ಕೆ.ಎಲ್.ಇ. ಸಂಸ್ಥೆಯು ರಾಷ್ಟ್ರದ ಸವರ್ೊನ್ನತ ಸಂಸ್ಥೆಯಾಗಿ ಸಮಾಜದ ಜನಸಾಮಾನ್ಯರ ಶಕ್ತಿಯನ್ನು ಮತ್ತಷ್ಟು ವೃದ್ಧಿಗೊಳಿಸಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಆರ್.ಎಲ್.ಎಸ್. ಪದವಿಪೂರ್ವ ಮಹಾವಿದ್ಯಾಲಯ ಧಾರವಾಡದ ಕನ್ನಡ ಉಪನ್ಯಾಸಕರಾದ ಪ್ರೊ. ಹೆಚ್.ಕೆ. ಗುರವ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಚಿಕ್ಕೋಡಿ ತಾಲುಕಿನ ಅಂಕಲಿಯ ಕೆ.ಎಲ್.ಇ. ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ಕೆ.ಎಲ್.ಇ. ಸಂಸ್ಥೆಯ 104ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ. ಸಂಸ್ಥೆಯ ಆರ್.ಎಲ್.ಎಸ್. ಪದವಿಪೂರ್ವ ಮಹಾವಿದ್ಯಾಲಯ ಧಾರವಾಡದ ಕನ್ನಡ ಉಪನ್ಯಾಸಕರಾದ ಪ್ರೊ. ಹೆಚ್.ಕೆ. ಗುರವ ಅವರು ಆಗಮಿಸಿದ್ದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಲ್ಲಪ್ಪ ಈ ಕೋರೆಯವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕುಮಾರಣ್ಣ ಕೋರೆ ಹಾಗೂ ಶ್ರೀ ಅಣ್ಣಾಸಾಹೇಬ ಜಕಾತಿ ಅಲಂಕೃತಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಂಗಸಂಸ್ಥೆಗಳ ಮುಖ್ಯಸ್ಥರಾದ ಪ್ರೊ. ಆರ್.ಸಿ. ಪಾಟೀಲ, ಶ್ರೀಮತಿ ಜೆ.ಎಸ್. ತಮಗೊಂಡ, ಶ್ರೀ ಬಿ.ಎಸ್. ಅಂಬಿ, ಶ್ರೀಮತಿ ಭಾರತಿ ಪಾಟೀಲ, ಪ್ರೊ.ಎಸ್.ಎಸ್. ಕೋಠಿವಾಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಅಂಗಸಂಸ್ಥೆಗಳ ಬೋಧಕ ವರ್ಗ ಮತ್ತು ವಿದ್ಯಾಥರ್ಿಗಳು ಹಾಜರಿದ್ದರು. ಸಿ.ಬಿ.ಎಸ್.ಇ. ವಿದ್ಯಾಥರ್ಿಗಳು ಪ್ರಾಥರ್ಿಸಿ, ಕೆ.ಎಲ್.ಇ. ಗೀತೆಯನ್ನು ಪ್ರಸ್ತುತಪಡಿಸಿದರು, ಪ್ರೊ.ಎಸ್.ಎಸ್. ಕೋಠಿವಾಲೆ ಸ್ವಾಗತಿಸಿದರು, ಪ್ರೊ.ಎನ್.ಆರ್. ಉಮರಾಣೆ ನಿರೂಪಿಸಿದರು, ಶ್ರೀಮತಿ ಯಶೋಧಾ ಪಾತ್ರೋಟ ವಂದಿಸಿದರು