ವೃದ್ಧಾಶ್ರಮಕ್ಕೆ ಕೆ.ಎಲ್.ಇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭೇಟಿ
KLE University students visit old age home
ವೃದ್ಧಾಶ್ರಮಕ್ಕೆ ಕೆ.ಎಲ್.ಇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭೇಟಿ
ಬೆಳಗಾವಿ 19 : ನಾಗನೂರು ಶ್ರೀ ಶಿವಬಸವ ಟ್ರಸ್ಟ್ನ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು.
ಈ ಕಾರ್ಯಕ್ರಮದಲ್ಲಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್ ಎಸ್ ನೇಸರ್ಗಿ ಮಾತನಾಡಿ, ವೃದ್ಧರು ತಮ್ಮ ಬಾಳಿನ ಜೀವನವನ್ನು ಶಾಂತಿಯಿಂದ ಕಳೆಯಬೇಕಾಗಿದೆ. ಅವರ ಅನುಭವ ಮತ್ತು ಜ್ಞಾನವನ್ನು ಯುವ ಪ್ರಜೆಗಳಿಗೆ ಹಂಚುವ ಸಲುವಾಗಿ ಯುವಕರು ಇಂತಹ ಆಶ್ರಮಕ್ಕೆ ಭೇಟಿಯಾಗುವ ಮೂಲಕ ವೃದ್ಧರನ್ನ ಗೌರವಿಸಿ ನಮ್ಮ ಸಂಸ್ಕೃತಿ ಮಾನವೀಯತೆ ಸಹಾನುಭೂತಿಯ ಅನುಭವವನ್ನ ವಿದ್ಯಾರ್ಥಿಗಳು ಪಡೆಯಬೇಕು ಎಂದರು. ಇದರಿಂದ ವಯೋ ವೃದ್ಧರಿಂದ ನಾವು ಅವರ ಜೀವನದ ಅನುಭವಗಳನ್ನು ಕಲಿಯಬಹುದು. ಇದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಎಂದರು.
ಈ ವೇಳೆ, ಡಾ.ಎಸ.ಎಸ. ನೇಸರಗಿ, ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿ, ಪ್ರೊ.ಮಲ್ಲೇಶ್ ಸಂಜೀವಣ್ಣವರ ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿ, ವೃದ್ಧಾಶ್ರಮದ ಸಂಯೋಜಕರಾದ ಎಂ.ಎಸ ಚೌಗಲಾ, ಜಾನಕಿ ಹಾಗೂ ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 