ವಿಸ್ಟಾ ಪ್ರತಿಭಾ ಹಬ್ಬದಲ್ಲಿ ಕೆಎಲ್‌ಇ ಪಿಯು ಕಾಲೇಜ್ ಜನರಲ್ ಚಾಂಪಿಯನ್
KLE PU College is the general champion at the Vista Talent Festival
ಮಹಾಲಿಂಗಪುರ 26: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಸ್ಟಾ-2025 ರಾಜ್ಯಮಟ್ಟದ ಪ್ರತಿಭಾ ಹಬ್ಬದಲ್ಲಿ ಎಸ್‌ಸಿಪಿ ಪಿಯು ಕಾಲೇಜ್ ಜನರಲ್ ಚಾಂಪಿಯನ್‌ಶಿಪ್ ಪಡೆದುಕೊಂಡಿತು. ರನ್ನರ್‌ಅಪ್ ಸ್ಥಾನ ಅಕ್ಷರಾ ಪಿಯು ಕಾಲೇಜ್ ಪಡೆಯಿತು.
ಉಚಿತ ನೊಂದಣಿಯೊಂದಿಗೆ ಒಟ್ಟು 10 ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಸುತ್ತಲಿನ 20ಕ್ಕೂ ಹೆಚ್ಚು ಕಾಲೇಜುಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜ್ಞಾನ ವಸುಧಾ (ವಿಜ್ಞಾನ ಪ್ರದರ್ಶನ) ಪ್ರತಿಭಾನ್ವೇಷಣ (ಪ್ರತಿಭಾ ಪರೀಕ್ಷೆ), ಸ್ವಾದ ಸಿದ್ದಿ (ಬೆಂಕಿ ರಹಿತ ಅಡುಗೆ ತಯಾರಿಕೆ), ನೃತ್ಯಂ ಭಾರತಿ (ಸಮೂಹ ನೃತ್ಯ), ಕಲ್ಪನಾ ವಿಜ್ಞಾಪನಾ (ಆ್ಯಡ್-ಮ್ಯಾಡ್ ಶೋ), ಸ್ವರ ರತ್ನಾವಳಿ(ಗಾಯನ), ದೃಶ್ಯ ಕಾವ್ಯಂ (ವಿಡಿಯೋಗ್ರಾಪಿ), ಚತುರ ವಿಜಯ (ಕ್ವಿಜ್ ಮಾಸ್ಟರ್), ಸೂತ್ರಧಾರಿಕಾ (ಸ್ಕಿಟ್), ಸೃಜನ ಸಂಘ (ಪೋಸ್ಟರ್ ಪ್ರೆಜೆಂಟೇಶನ್) ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ, ಕಲೆ, ಕೌಶಲ್ಯ, ಪ್ರತಿಭೆ, ಸಾಮರ್ಥ್ಯ ಸಾಬೀತುಪಡಿಸಿದರು.
ವಿಜೇತರಿಗೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ನಗದು, ಪ್ರಶಸ್ತಿಪತ್ರ, ಟ್ರೋಫಿ ಸೇರಿದಂತೆ ಒಟ್ಟು 1 ಲಕ್ಷಕ್ಕೂ ಅಧಿಕ ನಗದು ಬಹುಮಾನ ವಿತರಿಸಲಾಯಿತು. ಇಡೀ ಕಾಲೇಜು ಆವರಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲರವದೊಂದಿಗೆ ಇಡೀ ದಿನ ಹಬ್ಬದ ವಾತಾವರಣ ಕಂಡು ಬಂದಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಡಾ.ಕೆ.ಎಂ.ಅವರಾದಿ, ಪ್ರಾಚಾರ್ಯ ಎನ್.ಬಿ.ಪಾಟೀಲ, ಐಕ್ಯುಎಸಿ ಸಂಯೋಜಕಿ ಡಾ.ಎಸ್.ಡಿ.ಸೋರಗಾಂವಿ, ಪಿಯು ಪ್ರಾಚಾರ್ಯ ಎಲ್.ಬಿ.ತುಪ್ಪದ, ಜಿ.ಬಿ.ಜತ್ತಿ, ಎಸ್.ಎಸ್.ಮುಗಳ್ಯಾಳ, ಡಾ.ಎಸ್.ಸಿ.ಬಿಜ್ಜರಗಿ, ಸಿ.ಎಂ.ಐಗಳಿ, ಎಂ.ಬಿ.ಧರಿಗೌಡರ, ಡಾ.ಎಸ್.ಡಿ.ಸೋರಗಾಂವಿ, ಎ.ಎಂ.ಉಗಾರೆ ಮತ್ತಿತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 