ಬೆಳಗಾವಿ 20: ಕೆಎಲ್‌ಇ ಇಂಟರ್‌ನ್ಯಾಶನಲ್ ಫಾರ್ಮ್ ಡಿ ಕೊಲೊಕ್ವಿಯಮ್ 2024 ಅನ್ನು ಡಿಸೆಂಬರ್ 20 ಮತ್ತು 21, 2024 ರಂದು ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿಯು, ಅಮೇರಿಕನ್ ಅಸೋಸಿಯೇಷನ್ ಆಫ್ ಇಂಡಿಯನ್ ಫಾರ್ಮಾಸ್ಯುಟಿಕಲ್ ಸೈಂಟಿಸ್ಟ್ಸ (ಎಎಐಪಿಎಸ್) ಸಹಯೋಗದೊಂದಿಗೆ ಹಾಗೂ ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಬೆಂಬಲದೊಂದಿಗೆ ಆಯೋಜಿಸಲಾಗಿದೆ. ಇದರಲ್ಲಿ ಜ್ಞಾನ ವಿನಿಮಯ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಓಷಧಾಲಯ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತಜ್ಞರನ್ನು ಒಟ್ಟುಗೂಡಿಸುವ ಗುರಿಯನ್ನು ಕೊಲೊಕ್ವಿಯಂ ಹೊಂದಿದೆ.
ಕಾರ್ಯಕ್ರಮವನ್ನು 20ನೇ ಡಿಸೆಂಬರ್ 2024 ರಂದು ಮುಖ್ಯ ಅತಿಥಿ, ಡಾ.ಶ್ರೇನಿಕ್ ಶಾ, ಮಾಂಟೇಜ್ ಲ್ಯಾಬೋರೇಟರೀಸನ ನಿರ್ದೇಶಕ, ಅಹಮದಾಬಾದ್, ಗುಜರಾತ್, ರವರು ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಶ್ರೀ ಮುಕುಂದ್ ’ಮೈಕ್’ ಯೆಲ್ವಿಗಿ, ಂಂಕಖ ನ ಸ್ಥಾಪಕ ಮತ್ತು ಸದಸ್ಯ, ಗಖಂ ಫಾರ್ಮಾಸ್ಯುಟಿಕಲ್ ಇಂಟಿಗ್ರೇಷನ್ ಐಐಅ ನಲ್ಲಿ ಪ್ರಿನ್ಸಿಪಾಲ್ ಮತ್ತು ಮ್ಯಾನೇಜಿಂಗ್ ಪಾರ್ಟ್ನರ್, ಮತ್ತು ಋಒಖ-ಓಋಒ, ವಿಜ್ಞಾನಿ (ಜಿ) ಮತ್ತು ನಿರ್ದೇಶಕ ಡಾ. ಸುಬರ್ಣ ರಾಯ್ ರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ, ಡಾ. ನಿತಿನ್ ಎಂ. ಗಂಗನೆ, ಡಾ. ಎಂ.ಎಸ್. ಗಣಾಚಾರಿ, ಡಾ. ಸುನೀಲ್ ಎಸ್. ಜಲಾಲಪುರೆ, ಡಾ. ಎಂ.ಬಿ. ಪಾಟೀಲ, ಡಾ. ವಿ.ಎಸ್.ಮಾಸ್ತಿಹೊಳಿಮಠ, ಡಾ. ಡಾ.ವಿ.ಎಸ್.ಮಣ್ಣೂರ ಹಾಗೂ ಕೆಎಲ್‌ಇ ಫಾರ್ಮಸಿ ಕಾಲೇಜಿನ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಸುನೀಲ್ ಎಸ್. ಜಲಾಲಪುರೆ ಅವರು ಗಣ್ಯರನ್ನು ಮತ್ತು ಎಲ್ಲಾ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಡಾ. ಎಂ. ಎಸ್. ಗಣಾಚಾರಿ, ಅವರು ಏಐಇ ಇಂಟರ್ನ್ಯಾಷನಲ್ ಫಾರ್ಮ.ಡಿ ಕೊಲೊಕ್ವಿಯಂನ ಅವಲೋಕನವನ್ನು ವಿವರಿಸಿದರು. ಡಾ. ವಿ. ಎಸ್. ಮಾಸ್ತಿಹೊಳಿಮಠ, ಅವರು ಮುಖ್ಯ ಅತಿಥಿ ಡಾ. ಶ್ರೇನಿಕ್ ಶಾ ಅವರನ್ನು ಪರಿಚಯಿಸಿದರು. ಡಾ.ವಿ.ಎಸ್.ಮಣ್ಣೂರು, ಗೌರವ ಅತಿಥಿಗಳಾದ ಶ್ರೀ ಮುಕುಂದ್ ‘ಮೈಕ್’ ಯಲವಿಗಿ ಮತ್ತು ಡಾ.ಸುಬರ್ಣಾ ರಾಯ್ ಅವರನ್ನು ಪರಿಚಯಿಸಿದರು.
ಡಾ. ಸುನೀಲ್ ಎಸ್. ಜಲಾಲಪುರೆ ಅವರು ಸಮಾರಂಭದ ಅಧ್ಯಕ್ಷ ಡಾ. ನಿತಿನ್ ಎಂ. ಗಂಗನೆ ಅವರನ್ನು ಪರಿಚಯಿಸಿ, ಅವರ ವೃತ್ತಿಜೀವನ, ಸಾಧನೆಗಳು ಮತ್ತು ಕಾಹೆರ್ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ವಿವರಣೆಗಳನ್ನು ನೀಡಿದರು.
ಮುಖ್ಯ ಅತಿಥಿ ಡಾ. ಶ್ರೇನಿಕ್ ಷಾ ಅವರು ಆರೋಗ್ಯ ವೃತ್ತಿಪರರಿಗೆ ಪ್ರೇರಣೆ, ಸ್ವಾವಲಂಬನೆ ಮತ್ತು ಸ್ವಯಂ ಶಿಸ್ತಿನ ಮಹತ್ವವನ್ನು ತಿಳಿಸಿದರು. ಅವರು ’ಅನಾರೋಗ್ಯ ಮತ್ತು ಆರೋಗ್ಯ ’ ಪರಿಕಲ್ಪನೆ ಮತ್ತು ಆರೋಗ್ಯ ವ್ಯವಸ್ಥೆಯ ಅಗತ್ಯಗಳನ್ನು ಪೂರೈಸುವಲ್ಲಿ ಫಾರ್ಮಾಸ್ಯುಟಿಕಲ್ಸ್ ಭವಿಷ್ಯದ ವ್ಯಾಪ್ತಿ ಕುರಿತು ಮಾತನಾಡಿದರು. ಓಷಧಗಳ ಗುಣಮಟ್ಟದಲ್ಲಿ ನಂಬಿಕೆಯನ್ನು ಬೆಳೆಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಗೌರವ ಅತಿಥಿಗಳಾದ ಶ್ರೀ ಮುಕುಂದ್ ’ಮೈಕ್’ ಯೆಲ್ವಿಗಿ ಅವರು ಭಾರತದಲ್ಲಿ ಫಾರ್ಮಸಿ ಪಠ್ಯಕ್ರಮವನ್ನು ಸಮನ್ವಯಗೊಳಿಸುವಲ್ಲಿ ಮತ್ತು ಜಾಗತಿಕ ವೇದಿಕೆಗೆ ಭಾರತೀಯ ಫಾರ್ಮಾಸಿಸ್ಟ್‌ಗಳನ್ನು ಸಿದ್ಧಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವದ ಕುರಿತು ಮಾತನಾಡಿದರು, ಹಾಗೂ ಡಾ. ಸುಬರ್ಣಾ ರಾಯ್ ಅವರು ಆರೋಗ್ಯ ಕ್ಷೇತ್ರದ ಪ್ರಸ್ತುತ ಸನ್ನಿವೇಶ ಮತ್ತು ರೋಗ ನಿರ್ವಹಣೆಯಲ್ಲಿ ಸಮಗ್ರ ಓಷಧದ ಅಗತ್ಯತೆಯ ಕುರಿತು ಮಾತನಾಡಿದರು. ಆರೋಗ್ಯ ರಕ್ಷಣೆಯ ಅಭ್ಯಾಸಗಳನ್ನು ಸುಧಾರಿಸಲು ಓಷಧಗಳಲ್ಲಿ ನಾವೀನ್ಯತೆಯ ಮಹತ್ವವನ್ನು ತಿಳಿಸಿಕೊಟ್ಟರು.
24 ಸಂಸ್ಥೆಗಳಿಂದ 450 ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಸಮ್ಮೇಳನದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮುಕುಂದ್ ‘ಮೈಕ್’ ಯೆಲ್ವಿಗಿ, ಡಾ.ಹರ್ದೀಪ್ ಎಸ್.ಸಾಲುಜಾ, ಡಾ.ದೀಪಕ್ ಗುಪ್ತಾ, ಡಾ. ಸಾರಾ ಯಂಟ್, ಡಾ. ಮೇಧಾ ಡಿ. ಜೋಶಿ, ಡಾ. ಲಾರಾ ಜೋಗ್ಲೇಕರ್ ಮುಂತಾದ ಅಂತಾರಾಷ್ಟ್ರೀಯ ಭಾಷಣಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ಏಳು ಉಪನ್ಯಾಸಗಳು ಮತ್ತು ಪೋಸ್ಟರ್ ಮತ್ತು ಮೌಖಿಕ ಪ್ರಸ್ತುತಿಗಳು, ಬೀದಿ ನಾಟಕಗಳು, ಕಿರುಚಿತ್ರ ತಯಾರಿಕೆ, "ಮನ್ ಕಿ ಬಾತ್" ಮತ್ತು ಸಂವಾದಾತ್ಮಕ ಪ್ಯಾನಲ್ ಚರ್ಚೆಯಂತಹ ಚಟುವಟಿಕೆಗಳನ್ನು ಒಳಗೊಂಡಿತ್ತು.