ಕೆಎಲ್‌ಇ ಆಸ್ಪತ್ರೆ, ಮಧುಮೇಹ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ

ಕೆಎಲ್‌ಇ ಆಸ್ಪತ್ರೆ, ಮಧುಮೇಹ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ  KLE Hospital, free summer camp for diabetic children

ಬೆಳಗಾವಿ  14: ಮಧುಮೇಹ ಪೀಡಿತ 18 ವರ್ಷದೊಳಗಿನ ಅನೇಕ ಮಕ್ಕಳು ಧೈರ್ಯದಿಂದ ಅದನ್ನು ಎದುರಿಸುತ್ತಿದ್ದು, ಇನ್ಸುಲಿನ್ ಅವಲಂಬಿತರಾಗಿದ್ದರೂ ಸಹ ಸಾಮಾನ್ಯ ಮಕ್ಕಳಂತೆ ಶಿಕ್ಷಣ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆಂಡ ರಿಸರ್ಚನ ಉಪಕುಲಪತಿ ಡಾ. ಸಂದೀಪ ಶ್ರೀವಾತ್ಸವ ಅವರಿಂದಿಲ್ಲಿ ಅಭಿಪ್ರಾಯಪಟ್ಟರು.   

 ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ದಿ. 14 ಮೇ 2026ರಂದು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಏರಿ​‍್ಡಸಲಾಗಿದ್ದ 25ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಭಾರತ ಇಂದು ಮಧುಮೇಹ ರಾಜಧಾನಿಯಾಗುತ್ತಿದೆ. ಸರ್ಕಾರದ ಜೊತೆಗೆ ಖಾಸಗಿ ಹಾಗೂ ಸಾಮಾಜಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಧುಮೇಹ ಮಕ್ಕಳಿಗೆ ಅವಶ್ಯ ಚಿಕಿತ್ಸೆಯನ್ನು ನೀಡಲು ಕೈಜೋಡಿಸುವಂತೆ ಸಲಹೆ ನೀಡಿದ ಅವರು, ಮಧುಮೇಹ ಮಕ್ಕಳ ಆರೈಕೆ, ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ. ಜಾಲಿ ದಂಪತಿಗಳು ನಿಜಕ್ಕೂ ಶ್ಲಾಘನೀಯ. ಇಂಥ ಮಾದರಿ ಸಂಸ್ಥೆಗಳು ಭಾರತದಾದ್ಯಂತ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಸರಕಾರದೊಂದಿಗೆ ಸಂಘಸಂಸ್ಥೆಗಳು ಸಹಕರಿಸಬೇಕೆಂದು ತಿಳಿಸಿದರು.   

ಡಾ. ಎಂ.ವಿ. ಜಾಲಿ ಹಾಗೂ ಡಾ. ಸುಜಾತಾ ಜಾಲಿ ದಂಪತಿಗಳು ಕಳೆದ 25 ವರ್ಷಗಳಿಂದ ನಿಸ್ವಾರ್ಥ ಸೇವಾಭಾವದಿಂದ ಮಧುಮೇಹ ಪೀಡಿತ ಮಕ್ಕಳ ಆರೈಕೆ, ಶಿಕ್ಷಣ ಮತ್ತು ಅವರ ಭವಿಷ್ಯ ನಿರ್ಮಾಣಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸಮರ​‍್ಿತ ತಂಡದೊಂದಿಗೆ ನಡೆಸುತ್ತಿರುವ ಈ ಸೇವಾ ಪರಂಪರೆ ಇಂದು ಶ್ರೇಷ್ಠ ಶಿಖರ ತಲುಪಿದೆ. ಇದು ಕೇವಲ ವೈದ್ಯಕೀಯ ಸೇವೆಯಲ್ಲ, ಮಾನವೀಯತೆಯ ಮಹತ್ತರ ಉದಾಹರಣೆ” ಎಂದು ಅವರು ಶ್ಲಾಘಿಸಿದರು.  

ಮಧುಮೇಹ ಇರುವ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಜವಾಬ್ದಾರಿಯುತರು ಮತ್ತು ಚತುರರು. ಆಹಾರ ನಿಯಂತ್ರಣ, ಕ್ಯಾಲೊರಿಗಳ ಲೆಕ್ಕಾಚಾರ ಹಾಗೂ ಜೀವನಶೈಲಿಯಲ್ಲಿ ಶಿಸ್ತನ್ನು ಅವರು ಬಾಲ್ಯದಲ್ಲಿಯೇ ಕಲಿಯುತ್ತಾರೆ. ಇದರಿಂದ ಅವರು ಹೆಚ್ಚು ಆತ್ಮವಿಶ್ವಾಸಿ ಮತ್ತು ಸಹನಶೀಲರಾಗುತ್ತಾರೆ ಎಂದು ಹೇಳಿದರು.  

“ಮಕ್ಕಳ ಆರೈಕೆಯಲ್ಲಿ ತೊಡಗಿರುವ ಪೋಷಕರ ಸಹನಶೀಲತೆ, ತ್ಯಾಗ ಹಾಗೂ ಪ್ರೀತಿ ನಿಜಕ್ಕೂ ಅನನ್ಯ. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಸಾವಿರಕ್ಕೂ ಹೆಚ್ಚು ಮಕ್ಕಳ ಆರೈಕೆಯನ್ನು ಸಮರ​‍್ಕವಾಗಿ ನಿರ್ವಹಿಸಿರುವುದು ಅಪರೂಪದ ಸಾಧನೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  ಸ್ವಾಮಿ ವಿವೇಕಾನಂದರ ಸೇವಾ ತತ್ವಗಳನ್ನು ಅಳವಡಿಸಿಕೊಂಡಂತೆ ಈ ಸಂಸ್ಥೆ ನಿಜಾರ್ಥದಲ್ಲಿ ಮಾನವಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.  

ಚಿಕ್ಕ ಮಕ್ಕಳ ಮಧುಮೇಹ ತಜ್ಞ ವೈದ್ಯರಾದ    “ನಮ್ಮ ಕೇಂದ್ರದಲ್ಲಿ ಸುಮಾರು 625 ಮಕ್ಕಳು ನಿರಂತರ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮಧುಮೇಹ ಇದ್ದರೂ ಸಹ ಸಾಮಾನ್ಯ ಜೀವನ ನಡೆಸಬಹುದು, ಮದುವೆಯಾಗಬಹುದು ಹಾಗೂ ಉನ್ನತ ಸಾಧನೆ ಮಾಡಬಹುದು ಎಂಬ ವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಮಕ್ಕಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. 10 ತಿಂಗಳೊಳಗಿನ ಮಧುಮೇಹ ಪೀಡಿತ ಶಿಶುಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ” ಎಂದು ತಿಳಿಸಿದರು.  

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ   ಮಾತನಾಡಿ, ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿ ಪ್ರತಿಯೊಬ್ಬ ಮಕ್ಕಳಿಗೂ ಚಿಕಿತ್ಸೆ ತಲುಪುವಂತೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಕಾಹೆರನ ಕುಲಸ  ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ    , ಹಿರಿಯ ಮಧುಮೇಹ ತಜ್ಞರಾದ  ಹಾಗೂ   ಮಾತನಾಡಿದರು. ಡಾ. ಆರ್‌.ಎಸ್‌. ಮುಧೋಳ ಉಪಸ್ಥಿತರಿದ್ದರು.