ಕೆಎಲ್‌ಇ ಶಿಕ್ಷಣ ಸಂಸ್ಥೆ ರಾಜರಾಜೇಶ್ವರಿ ಕಾಲೇಜು: ಆಂಗ್ಲ ಭಾಷಾ ಕಾರ್ಯಾಗಾರ
ರಾಣೇಬೆನ್ನೂರು 18; ಭಾಷೆ ಯಾವುದೇ ಒಂದು ವ್ಯವಸ್ಥೆಗೆ ಸೀಮಿತವಾಗಿಲ್ಲ ಬದುಕುವ ಭಾಷೆ ಆಂಗ್ಲವಾದರೆ ಜೀವನ ಭಾಷೆ ಕನ್ನಡ ಆಂಗ್ಲ ಮತ್ತು ಕನ್ನಡ ಸುಲಲಿತವಾದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ವಿಯನ್ನು ಸಾಧಿಸಲು ಸಾಧ್ಯವಾಗುವುದು ಎಂದು ಲಕ್ಷ್ಮೇಶ್ವರದ ಮುನ್ಸಿಪಲ್ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ, ಭೀಮಸೇನ ಉಗ್ರದ ಹೇಳಿದರು. ಅವರು ಇಲ್ಲಿನ ಕೆ. ಎಲ್. ಇ.ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ, ವಾಣಿಜ್ಯ ಮಹಿಳಾ ವಿದ್ಯಾಲಯದ ಇಂಗ್ಲೀಷ್ ವಿಭಾಗದಿಂದ ಆಯೋಜಿಸಲಾಗಿದ್ದ, "ವಿಕ್ಟೋರಿಯನ್ ಏಸ್ಥಟಿಸಂ ಮತ್ತು ಡಿಕೆಡ ಠ್ಸ್ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪಾಲ್ಗೊಂಡ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಆಯಾ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು, ಆಂಗ್ಲ ಭಾಷೆ ನಾಟಕಕಾರರು ತಮ್ಮದೇ ಆದ ಸರಳ ಭಾಷೆ ಮತ್ತು ಸರಳತೆ ಮೂಲಕವಾಗಿ, ಆಂಗ್ಲ ಭಾಷೆಯಲ್ಲಿ ಪ್ರಬುದ್ಧತೆ ಮೆರೆದು ಭವಿಷ್ಯಕ್ಕೆ ಸಾಕಷ್ಟು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದರು. ವಿದ್ಯಾರ್ಥಿಗಳಲ್ಲಿ, ಭಾಷೆಯ ಬಳಕೆ, ವೈವಿಧ್ಯತೆ, ಮತ್ತು ವೈಚಾರಿಕತೆ ರೂಪಿಸಿಕೊಳ್ಳುವ ಗುಣ ಧರ್ಮವನ್ನು ಇತಿಹಾಸದ ಆಸದ ಆಂಗ್ಲ ಸಾಹಿತ್ಯದ ಶ್ರೇಷ್ಠ ನಾಟಕಕಾರರಾದ ವಿಲಿಯಂ ಸೆಕ್ಸ್ಪಿಯರ್ ಅವರ ನಾಟಕಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ ಎಂದು ಕರೆ ನೀಡಿದರು. ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ, ಕಾಲೇಜು ಪ್ರಾಚಾರ್ಯ ಪ್ರೊ, ನಾರಾಯಣ ನಾಯಕ್ ಎ. ಅವರು ವಿದ್ಯಾರ್ಥಿಗಳು, ಮತ್ತು ಸಾಹಿತ್ಯದ ಅಧ್ಯಯನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಪ್ರೊ, ಸಾಯಿಲತಾ ಮಡಿವಾಳರ, ಮತ್ತು ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಕುಸುಮ ಮತ್ತು ಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ, ವೀರೇಶ್ ಕುರಹಟ್ಟಿ ಸ್ವಾಗತಿಸಿದರು.ಕಾರ್ಯಕ್ರಮ ಸಂಯೋಜಕ ಪ್ರೊ, ಭೀಮಾರತಿ ತೀರ್ಥ, ಪರಿಚಯಿಸಿದರು. ಆಫ್ರಿನ್ ಕಿತ್ತೂರ್ ನಿರೂಪಿಸಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ, ರೇಖಾ ಶಿಡೇನೂರ, ವಂದಿಸಿದರು