ಕೆಎಲ್ಇ: ಓ.ಆರ್.ಎಸ್ ದಿನ ಆಚರಣೆ

ಬೆಳಗಾವಿ, 31: ಮಕ್ಕಳಲ್ಲಿ ಅತಿಸಾರ ಭೇದಿ ಹಾಗೂ ವಾಂತಿಯಿಂದಾಗಿ ಪ್ರತಿ ವರ್ಷ ಭಾರತದಲ್ಲಿ ಸುಮಾರು 1 ಮಿಲಿಯನ್ನನಷ್ಟು ಮಕ್ಕಳು ಅಸುನೀಗುತ್ತಿದ್ದಾರೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿಯಾಗಿದೆ. ಅನಾರೋಗ್ಯಕರ ಪರಿಸರ, ಮಲೀನತೆಯಿಂದ ಕೂಡಿದ ಪಯರ್ಾವರಣ, ಹವ್ಯಾಸಗಳು ಹೀಗೆ ಮುಂತಾದ ಕಾರಣಗಳಿಂದ ಈ ರೀತಿಯ ತೊಂದರೆಗಳು ಕಾಣಸಿಗುತ್ತವೆ. ಇದರಿಂದ ತುಂಬಾ ನಿಶಕ್ತಿ ಹೊಂದಿದಾಗ ಓ.ಆರ್.ಎಸ್ ದ್ರಾವಣವು ಇದು ಒಂದು ಅಮೃತದಂತೆ ಕೆಲಸ ನಿರ್ವಹಿಸುತ್ತದೆ ಇದನ್ನು ಯಾವ ವಯಸ್ಸಿನವರು ಕೂಡ ಸೇವಿಸಬಹುದು ಇದರಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುದಿಲ್ಲ ಎಂದು ಕಾರ್ಯಕ್ರಮದ ಮುಖ್ಯ ಅಥಿತಿ ಸ್ಥಾನವನ್ನು ವಹಿಸಿದ ಬೆಳಗಂ ಅಸೋಶಿಯೇಶನ್ ಆಪ್ ಪಿಡಿಯಾಟ್ರಿಕ್ಸ ನ ಅಧ್ಯಕ್ಷ ಡಾ. ಶೈಲೇಶ ಪಾಟೀಲ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಿಂದ ಹಮ್ಮಿಕೊಂಡಿದ್ದ  ಒಆರ್ಎಸ್ ದಿನದ ಕಾರ್ಯಕ್ರಮವನ್ನು  ಉದ್ಘಾಟಿಸುತ್ತ ಮಾತನಾಡುತ್ತಿದ್ದರು.  

ಕಾರ್ಯಕ್ರಮದ ಇನ್ನೊರ್ವ ಮುಖ್ಯ ಅಥಿತಿ ಸ್ಥಾನ ವಹಿಸಿದ ಯು.ಎಸ್.ಎಂ ಕೆ.ಎಲ್.ಇ ಯ ನಿದರ್ೇಶಕ ಡಾ. ಎಚ್.ಬಿ ರಾಜಶೇಖರ ಮಾತನಾಡುತ್ತ ಅನಾದಿಕಾಲದಿಂದಲೂ ಮನುಕುಲವನ್ನು ಶೋಷಿಸುತ್ತ ಬಂದಿರುವ ಈ ನಿರ್ಜಲೀಕರಣ ಎಂಬ ಮಾರಿಯು ಆರೋಗ್ಯಕರ ಹವ್ಯಾಸಗಳಿಂದ ದೂರವಿಡಬಹುದಾಗಿದೆ. ಒಂದು ವೇಳೆ ಇದಕ್ಕೆ ಸಿಲುಕಿದರೆ ಒಆರ್ ಎಸ್ ದ್ರಾವಣವು ನಮ್ಮ ಶರೀರದಲ್ಲಿ ಉಂಟಾದ ನೀರಿನ ಪ್ರಮಾಣವನ್ನು ಸರಿದೂಗಿಸುವಲ್ಲಿ ಪ್ರಥಮ ಪಾತ್ರವಹಿಸುತ್ತದೆ. ಇದರ ಜೊತೆಗೆ ತಕ್ಕ ಚಿಕಿತ್ಸೆಯನ್ನು ಹೊಂದಿದರೆ ಈ ರೋಗದಿಂದ ಮುಕ್ತಿಹೊಂದಬಹುದಾಗಿದೆ ಎಂದು ತಿಳುವಳಿಕೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ನೀಯೊಜಿತ ನಿದರ್ೇಶಕರಾದ ಡಾ.ಆರ್.ಜಿ ನೇಲವಿಗೆ ಮಾತನಾಡುತ್ತ ನಿರ್ಜಲೀಕರಣ ಹವಾಮಾನದ ಆಧಾರದಮೇಲೆ ಬರುವ ರೋಗವಾಗಿದ್ದು ಈ ನಿಟ್ಟಿನಲ್ಲಿ ಸಕರ್ಾರ ಹಾಗೂ ಹಲವೂ ಸಾಮಾಜಿಕ ಸಂಘಗಳು ಕಾರ್ಯನಿರ್ವಹಿಸುತ್ತಿದ್ದಾಗ್ಯೂ ಹತೋಟಿಯಲ್ಲಿಡಲು ಸಾಧ್ಯವಾಗುತ್ತಿಲ್ಲವೆನ್ನುವದು ಖೇದಕರವೆನ್ನಿಸುತ್ತದೆ. ರೋಗಮುಕ್ತ ಸಮಾಜ ನೀಮರ್ಾಣಮಾಡಲು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವು ಈ ಬಗ್ಗೆ ಜಾಗೃತಿ ಮೂಡಿಸುವದು ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು,. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಕಡ್ಡಿ ಟೇಕ್ ಹೋಮ್  ಮೇಸೆಜ್ ಎನ್ನುವ ವಿಷಯದ ಮತ್ತು ಡಾ.ಬಸವರಾಜ ಇವರು ಓ.ಆರ್.ಎಸ್  ಚಿ ಒಚಿರಛಿ ಃಣಟಟಜಣ (ಚಿಟಿರಿತಟಿ) ಎನ್ನುವ ವಿಷಯದ ಬಗ್ಗೆ ಮತ್ತು ಡಾ.ಪ್ರಜ್ನಾ ಕೆ. ಇವರು ಸೋಶಿಯಲ್ ಅವೇರನೆಸ್ಸ ರಿಗಾರಡರ್ಿಂಗ್ ಓ.ಅರ್.ಎಸ್. ಎನ್ನುವ ವಿಷಯದ ಬಗ್ಗೆ ಸವಿರವಾಗಿ ಮಾತನಾಡಿದರು. 

ಕಾರ್ಯಕ್ರಮಲ್ಲಿ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಕಡ್ಡಿ, ಡಾ.ಸುರೇಶ ಕಾಖಂಡಕಿ, ಡಾ.ಬಸವರಾಜ ಕೆ. ಡಾ. ಪ್ರಜ್ಞಾ, ಡಾ. ಡಾ.ಸೌಮ್ಯ ಡಾ.ಅನಿತಾ ವಿಕ್ರಾಂತ ನೇಸರಿ, ಡಾ.ನಿತೇಶ್, ನಸರ್ಿಂಗ್ ವಿದ್ಯಾಥರ್ಿಗಳು, ಯು.ಎಸ್.ಎಂ.ಕೆ.ಎಲ್.ಇ ಯ ವೈದ್ಯ ವಿದ್ಯಾಥರ್ಿಗಳು, ಆರೋಗ್ಯ ಸಹಾಯಕಿ ವಿದ್ಯಾಥರ್ಿಗಳು ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿದರು ಡಾ.ಸುರೇಶ ಕಾಖಂಡಕಿ ಸ್ವಾಗತಿಸಿದರು ಪ್ರಭಾವತಿ ಪಾಟೀಲ ವಂದಿಸಿದರು.