ಕೆ.ಎಂ.ನಾಗರಳ್ಳಿ ನಿಧನ

K.M. Nagaralli passes away

ಹುಬ್ಬಳ್ಳಿ ,ಮಾರ್ಚ್‌ 11: ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ಕಲ್ಲಪ್ಪ ಮಹದೇವಪ್ಪ ನಾಗರಳ್ಳಿ (71) ಮಂಗಳವಾರ ಮಾರ್ಚ್‌ 11 ಮಧ್ಯಾಹ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಡಿಮೆ ರಕ್ತದೊತ್ತಡದಿಂದ ಕೊನೆಯುಸಿರೆಳೆದರು.  

ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 

ರೊಟ್ಟಿಗವಾಡ ಗ್ರಾಮದ ಜಿಇಸಿ ಜಿ.ಕೆ.ಹಿರೇಗೌಡರ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಸುಮಾರು 3 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಅವರು ರೊಟ್ಟಿಗವಾಡ, ಕೊಂಕಣ ಕುರಹಟ್ಟಿ, ಉಮಚಗಿ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳಲ್ಲಿ ದೊಡ್ಡ ವಿದ್ಯಾರ್ಥಿ ಬಳಗ ಹೊಂದಿದ್ದಾರೆ.  

ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಯರಿನಾರಾಯಣಪುರದಲ್ಲಿ ಇಂದು ಮಾರ್ಚ್‌ 12 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.