ಹೋಮ್ ಕ್ವಾರೆಂಟೈನ್ ಮುಗಿಸಿ ಕರ್ತವ್ಯಕ್ಕೆ ಹಾಜರಾದ ಸಚಿವ ಕೆ.ಸುಧಾಕರ್

ಬೆಂಗಳೂರು, ಜೂನ್ 30: ತಂದೆ, ಪತ್ನಿ ಹಾಗೂ ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದೊಂದು  ವಾರದಿಂದ ಹೋಮ್ ಕ್ವಾರೆಂಟೈನ್‌ನಲ್ಲಿದ್ದ ವೈದ್ಯಕೀಯ ಸಚಿವ ಕೆ.ಸುಧಾಕರ್ ಇಂದಿನಿಂದ  ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಕೋವಿಡ್ ಸಂಬಂಧಿಸಿದ ಸಭೆಗೆ ವಿಧಾನಸೌಧದಲ್ಲಿ ಪಾಲ್ಗೊಳ್ಳುವ ಮುನ್ನ ಪತ್ನಿ, ಪುತ್ರಿಗೆ ಕೊರೋನಾ ಪಾಸಿಟಿವ್ ನಿಂದ ನಾನು ಕ್ವಾರಂಟೈನ್‌ನಲ್ಲಿದ್ದೆ.ಎರಡು  ಬಾರಿಯ ಟೆಸ್ಟಿಂಗ್ ನಲ್ಲಿ ನನ್ನ ರಿಪೋರ್ಟ್ ನೆಗಟಿವ್ ಬಂತು. ಇವಾಗ ಕ್ವಾರಂಟೈನ್ ಮುಗಿಸಿ  ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು  ಮತ್ತೆ ಬಂದಿದ್ದೇನೆ ಎಂದರು.ಇನ್ನೆರಡು ದಿನಗಳಲ್ಲಿ ತನ್ನ ಪತ್ನಿ ಹಾಗೂ ಪುತ್ರಿ ಕೊರೋನಾ ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಮ್ಮ ಕುಟುಂಬ ಸದಸ್ಯರು ಗುಣ ಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸಿದರು.