ರಾಘವೇಂದ್ರ ನೀಲಣ್ಣವರಿಗೆ ಜ್ಯೋತಿಬಾ ಫುಲೆ ರಾಜ್ಯ ಪ್ರಶಸ್ತಿ

Jyotiba Phule State Award for Raghavendra Neelanna

ರಾಘವೇಂದ್ರ ನೀಲಣ್ಣವರಿಗೆ ಜ್ಯೋತಿಬಾ ಫುಲೆ ರಾಜ್ಯ ಪ್ರಶಸ್ತಿ  

ಮಹಾಲಿಂಗಪುರ, 18; ವಿದ್ಯಾ ಕಾಶಿ ಎಂದು ಹೆಸರಾದ, ಧಾರವಾಡ ಮಹಾನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಸಭಾ ಭವನ ಧಾರವಾಡದಲ್ಲಿ. ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ಆಶ್ರಯದಲ್ಲಿ "ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ" ಹಾಗೂ ರಾಜ್ಯ ಮಟ್ಟದ ಸಾಧಕರಿಗೆ "ಪ್ರಶಸ್ತಿ ಪ್ರಧಾನ"ಸಮಾರಂಭ ಜರಗಿತು.  

ಸಮೀಪದ ರನ್ನ ಬೆಳಗಲಿಯ ಪಟ್ಟಣದ ನಿವಾಸಿಯಾದ ರಾಘವೇಂದ್ರ ಮಹಾದೇವ ನೀಲಣ್ಣವರವರಿಗೆ ಶಿಕ್ಷಣ ಇಲಾಖೆಯಲ್ಲಿ ಗೌರವ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು. ಅತ್ಯುತ್ತಮ ಯೋಗ ಶಿಕ್ಷಕರಾಗಿ ಉಚಿತ ಯೋಗ ಶಿಕ್ಷಣ ನೀಡುತ್ತಾ, ಉಪನ್ಯಾಸಕರಾಗಿ ರಾಜ್ಯ, ಜಿಲ್ಲಾ ಮಟ್ಟದ ಸರ್ಕಾರಿ ಹಾಗೂ ಸಮುದಾಯಗಳ ವೇದಿಕೆಯಲ್ಲಿ ಉಪನ್ಯಾಸಕರಾಗಿ, ಪತ್ರಕರ್ತರಾಗಿ, ಲೇಖಕ, ಸಾಹಿತಿಗಳಾಗಿ, ಸೇವೆ ಸಲ್ಲಿಸುತ್ತಾ ಬರುತ್ತಿರುವುದನ್ನು ಗುರುತಿಸಿ ಇದೇ ಫೇಬ್ರುವರಿ 16 2025 ರವಿವಾರ ರಂದು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಸಭಾ ಭವನದಲ್ಲಿ. ಆಯೋಜಿಸಲಾದ ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವಾ ಸಾವಿತ್ರಿಬಾಯಿ ಫುಲೆಯವರ 194ನೇ ಜಯಂತೋತ್ಸವದ ಅಂಗವಾಗಿ ನಡೆದ ಚಿಂತನ ಮಂಥನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾಧಕರಾದ ರಾಘವೇಂದ್ರ ಮಹಾದೇವ ನೀಲಣ್ಣವರ ಸಾಧಕರಿಗೆ "ಜ್ಯೋತಿಬಾ ಫುಲೆ ರಾಜ್ಯ ಪ್ರಶಸ್ತಿ 2025"ರ ಪುರಸ್ಕಾರ ನೀಡಿ ಗೌರವಿಸಿದ್ದಾರೆ.