ರಾಜ್ಯಕ್ಕೆ ಆಯ್ಕೆಯಾದ ಜ್ಯೋತಿ ಹಂಚಿನಮನಿಗೆ ಸತ್ಕಾರ

ಲೋಕದರ್ಶನ ವರದಿ

ಬೈಲಹೊಂಗಲ 07: ಜೀವನದಲ್ಲಿ ಎನಾದರೂ ಸಾಧನೆ ಮಾಡಬೇಕಾದರೆ ಉತ್ತಮ ಗುರು ಪರಿಶ್ರಮ ಬಹುಮುಖ್ಯವಾಗಿದೆ ಇದಕ್ಕೆ ತಂದೆ ತಾಯಿ ಹಾಗೂ ಗುರುಗಳು ಸಹಕಾರ ಅಗತ್ಯವಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಕಾಶೀನಾಥ ಬಿರಾದಾರ ಹೇಳಿದರು.

        ಸಂಸ್ಥೆಯ ನೇತಾಜಿ ಸುಭಾಸಚಂದ್ರ ಬೋಸ್ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆದ ಭಾರತೀಯ ಮಹಿಳಾ ಸೈನಿಕ ಹುದೈಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕೆ ಪ್ರಥಮ ಸ್ಥಾನ ಪಡೆದು ಸೇನೆಗೆ ಆಯ್ಕೆಯಾದ ಶಾಲೆಯ ಹಳೆಯ ವಿದ್ಯಾರ್ಥಿನಿ ಜ್ಯೋತಿ ಹಂಚಿನಮನಿ ಅವರ ಸತ್ಕಾರ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ದೇಶ ಕಾಯುವ ಸೇವೆ ಎಲ್ಲಿ ಸೇವೆಗಿಂತಲೂ ದೊಡ್ಡದು ಇಂತಹ ಸೇವೆ ಆಯ್ಕೆಯಾಗಿರುವ ಜ್ಯೋತಿ ಮೊದಲಿನಿಂದಲೂ ಆದರ್ಶ ವಿದ್ಯಾರ್ಥಿನಿಯಾಗಿದ್ದಾಳೆ ಇವಳ ಪರಿಶ್ರಮಕ್ಕೆ ಅವರ ಕುಟುಂಬ ಹಾಗೂ ಶಾಲೆಯ ಶಿಕ್ಷಕರು ನೀಡಿದ ಒಳ್ಳೆಯ ಮಾರ್ಗ ದರ್ಶನದಿಂದ ಈ ಸಾಧನೆಯನ್ನ ಮಾಡಿದ್ದಾಳೆ ಎಂದರು.

              ಜ್ಯೋತಿ ಹಂಚಿನಮನಿ ಮಾತನಾಡಿ, ನನ್ನ ಈ ಸಾಧನೆಗೆ ನಮ್ಮ ತಂದೆ ತಾಯಿ ಹಾಗೂ ಈ ಶಾಲೆಯ ಗುರುವೃಂದದವರ ಆಶೀರ್ವಾದ ಕಾರಣ ಎಲ್ಲರೂ ತಂದೆ ತಾಯಿಗೆ ಗೌರವ ನಿಡಬೇಕು ಹಾಗೂ ಗುರುಗಳಿಗೆ ಪ್ರೀತಿ ತೋರಬೇಕೆಂದು ನುಡಿದು ಎಲ್ಲರೂ ಇಂತಹ ಸಾಧನೆ ಮಾಡಿ ದೇಶ ಸೇವೆಗೆ ಮುಂದಾಗಬೇಕೆಂದರು. 

ಸಂಸ್ಥೆಯ ಉಪಾದ್ಯಕ್ಷ ಯೋಗೀಶ ಬಿರಾದಾರ, ಪತ್ರಕರ್ತ ಮಹಾತೇಶ ರೇಶ್ಮಿ ಶಿಕ್ಚಕಿ ವೀಣಾ ಜೋಶಿ, ಮಲ್ಲಮ ಹಂಚಿನಮನಿ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ ಕಂಠಿ, ಎಂ ಆಯ್ ನದಾಫ್, ಜಿ ಎಂ ಗಾಡದ, ಸಾಗರ ಆರಿಬೆಂಚಿ, ಶಿಕ್ಷಕಿ ಎಸ್ ವಿ ಹಂಪಿಹೊಳಿ, ಸರೋಜಾ ಕುರಗುಂದ ಶಲೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು.

      ವಿ.ಎಸ್.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂತೋಷ ಬೀದಿಮಠ ನಿರೂಪಿಸಿದರು,  ಮುಖ್ಯಶಿಕ್ಷಕ ವಿ. ಬಿ. ಚರಲಿಂಗಮಠ  ಸ್ವಾಗತಿಸಿದರು. ಎಸ್. ಎ. ಕರಿಸಿರಿ ವಂದಿಸಿದರು.