ಜ್ಯೋತಿ ಪಿ ಹೊಸಟ್ಟಿ ಅವರಿಗೆ ಸನ್ಮಾನ

ಬೆಳಗಾವಿ: 04 : ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಸಿಯನ್ ಎಂದು ಕಾರ್ಯನಿರ್ವಹಿಸುತ್ತಿರುವ ಜ್ಯೋತಿ ಪಿ ಹೊಸಟ್ಟಿ ಇವರು ಗಾಂಧಿನಗರ, ಗುಜರಾತ್ನಲ್ಲಿ ಜರುಗಿದ 2018-19 ನೇ ಸಾಲಿನ  "ಆಲ್ ಇಂಡಿಯಾ ಸಿವ್ಹಿಲ್ ಸವರ್ಿಸಸ್ ಸ್ವಿಮ್ಮಿಂಗ್ ಟೂನರ್ಾಮೆಂಟ್ ನಲ್ಲಿ ಸ್ವಿಮ್ಮಿಂಗ್ 50 ಮೀ. ಬಟರ್ಪ್ಲೈ ಎಂಬ ಕ್ರೀಡೆಯಲ್ಲಿ ಮೂರನೇ ಸ್ಥಾನದಲ್ಲಿ ಜಯಗಳಿಸಿ, ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿರುತ್ತಾರೆ. ಇವರನ್ನು ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಸನ್ಮಾನಿಸಿ ಗೌರವಿಸಿದರು.     

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್., ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ, ಬೆಳಗಾವಿ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ: ಸಂಜಯ ಡುಮ್ಮಗೋಳ ಹಾಗೂ ಇತರರು ಉಪಸ್ಥಿತರಿದ್ದರು