ಮುಧೋಳ: ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ, ನಮ್ಮೆಲ್ಲರ ಗುರಿಯೆಡೆಗೆ ಕೈ ಹಿಡಿದು ನಡೆಸುವ ಎಲ್ಲ ಗುರುಗಳ ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ, ವಿದ್ಯಾಥರ್ಿಗಳಿಗೆ ಪಾಠದ ಜೊತೆಗೆ ವಿವೇಕ, ತಾಳ್ಮೆ, ಮಾನವೀಯತೆಯನ್ನು ಬೋಧಿಸಿ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಕ್ತಿ ಮತ್ತು ಸಾಮರ್ಥ್ಯ ಗುರುವಿನಲ್ಲಿ ಇರುತ್ತದೆ. ಬದುಕಿನಲ್ಲಿ ಕಲಿಕೆಗೆ ಕೊನೆ ಎಂಬುದೇ ಇಲ್ಲ,ಶಾಲೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವೂ ಅಲ್ಲ, ತರಗತಿಯ ಒಳಗೆ ಮತ್ತು ಹೊರಗೆ ಕಲಿಸಿದ, ಬೆಳೆಸಿದ, ತಿದ್ದಿ ತೀಡಿದ ಗುರುಗಳನ್ನು ನಾವಿಂದು ಸ್ಮರಿಸಬೇಕಾಗಿದೆ ಎಂದು ಎಸ್.ಆರ್.ಕಂಠಿ ಕಾಲೇಜಿನ ಕನ್ನಡ ವಿಷಯದ ಪ್ರಾದ್ಯಾಪಕ ಪ್ರೊ.ಆರ್. ನಾಗರಾಜ್ ಹೇಳಿದರು.
ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಸ್ಥಳೀಯ ಶ್ರೀ ಎಸ್.ಆರ್.ಕಂಠಿ ಕಾಲೇಜಿನ ಎನ್ಎಸ್ಎಸ್ ಮತ್ತು ಯುಥ್ ರೆಡ್ ಕ್ರಾಸ್ ಘಟಕ ಹಾಗೂ ಮಹಾವಿದ್ಯಾಲಯದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾಥರ್ಿಗಳು ಗುರುವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿ ಆಚಾರ್ಯ ದೇವೊಭವ ಎಂಬ ನುಡಿಯಂತೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದೆ, ರಾಮಾಯಣ,ಮಹಾಭಾರತ ಕಾಲದಿಂದಲೂ ಗುರು-ಶಿಷ್ಯರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ, ಮಕ್ಕಳು ದೇಶದ ಭವಿಷ್ಯವನ್ನು ನಿಮರ್ಿಸುತ್ತಾರೆಂದು ನಾವಿಂದು ಹೇಳುತ್ತೇವೆ ಅಂತಹ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ದೇಶದ ನಿಜವಾದ ಶಿಲ್ಪಿಗಳು ಎನ್ನಬಹುದು ಎಂದರು.
ಭಾರತದ ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದ್ದರಿಂದ ಅಂದಿನಿಂದ ಇಂದಿನವರೆಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿ, ಸಾಮಾಜಿಕ ಚಿಂತಕರಾಗಿ, ವಾಗ್ಮಿಗಳಾಗಿ, ರಾಷ್ಟ್ರಪತಿಯಾಗಿ ದೇಶದ ಸರ್ವತೋಮುಖ ಅಭಿವೃದ್ದಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ.
ಗುರು-ಶಿಷ್ಯರ ನಡುವಿನ ಸಂಬಂಧ ಉತ್ತಮ ರೀತಿಯಿಂದ ಕೂಡಿರಬೇಕು,ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರನ್ನು ನೆನೆಪಿಸಿಕೊಂಡು ಅವರಂತೆ ತಾವುಗಳು ಆಗಬೇಕೆಂದು ಹೇಳಿದರು.
ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಾನವೀಯ ಮೌಲ್ಯಗಳು ಕುಸಿದಿವೆ,ಹೀಗೆ ಬರುವ ದಿನಗಳಲ್ಲಿ ಎಲ್ಲದಕ್ಕೂ ಅಪಾಯಕಾರಿಯಾಗುತ್ತಿದೆ.
ಅದಕ್ಕಾಗಿ ಕೂಡಲೇ ಎಚ್ಚತ್ತು ಮಕ್ಕಳ ಬಾಲ್ಯದ ಶಿಕ್ಷಣದಲ್ಲಿಯೇ ಗುಣಮಟ್ಟದ ಮೌಲ್ಯಗಳನ್ನು ತಿಳಿಸಬೇಕು.
ಶಿಕ್ಷಕರ ವೃತ್ತಿಗೆ ಸರಿಸಮಾನವಾದ ವೃತ್ತಿ ಬೇರೆ ಯಾವುದು ಇಲ್ಲ,ಯಾವುದೇ ವ್ಯಕ್ತಿ ಇರಲಿ, ಅವರು ಎಂತಹ ದೊಡ್ಡ ಸ್ಥಾನದಲ್ಲಿರಲಿ, ತಮಗೆ ಕಲಿಸಿದ ಗುರುಗಳನ್ನು ಕಂಡರೆ ಅವರನ್ನು ಗೌರವಿಸುತ್ತಾರೆ, ಇದುವೇ ಗುರುಗಳಿಗೆ ಕೊಡುವ ಗೌರವವಾಗಿದೆ ಎಂದರು.
ಸಾಂಸ್ಕೃತಿಕ ವಿಭಾಗದ ಕಾಯರ್ಾಧ್ಯಕ್ಷೆ ಪ್ರೊ.ಜಿ.ಬಿ.ಅಣೆಪ್ಪನವರ, ಕ್ರೀಡಾ ವಿಭಾಗದ ಕಾಯರ್ಾಧ್ಯಕ್ಷ ಡಾ.ಎಂ.ಆರ್.ಜರಕುಂಟಿ, ಎನ್ಎಸ್ಎಸ್ ಘಟಕಾಧಿಕಾರಿಗಳಾದ ಪ್ರೊ.ವ್ಹಿ.ಎಂ.ಕಿತ್ತೂರ, ಪ್ರೊ.ಎಂ.ಎಚ್.ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿದ್ಯಾಥರ್ಿನಿ ದೀಪಾ ಕಂಕಾಳೆ ಸ್ವಾಗತಿಸಿದರು, ವಿದ್ಯಾಥರ್ಿಗಳಾದ ಹನಮಂತ ಫಂಡರಿ ಮತ್ತು ಕಾವ್ಯಾ ನಾಶಿ ನಿರೂಪಿಸಿದರು. ವಿದ್ಯಾಥರ್ಿನಿ ಪಲ್ಲವಿ ಕುಲಕಣರ್ಿ ವಂದಿಸಿದರು. ವಿದ್ಯಾಥರ್ಿ ಪ್ರಜ್ವಲ್ ಸೊನ್ನ್ ಪ್ರಾರ್ಥನೆ ಹೇಳಿದರು