ಪೋಲಿಯೋ ಮೇಲಿನ ನಮ್ಮ ಗೆಲುವಿಗೆ ಕೇವಲ 2 ಹನಿಗಳು ಸಾಕು

ಬೆಳಗಾವಿ, 19: ರಾಷ್ಟೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ದಿನಾಂಕ 19.01.2020 ರಂದು ರಾಷ್ಟ್ರೀಯ ಪಲ್ಸ ಪೋಲಿಯೋ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನಾ  ಸಮಾರಂಭ ನಗರ ಆರೋಗ್ಯ ಕೇಂದ್ರ ವಡಗಾವಿಯಲ್ಲಿ ಜರುಗಿತು.

 ಸಮಾರಂಭ ಉದ್ಘಾಟನೆಯನ್ನು ಡಾ. ಅಪ್ಪಾಸಹೇಬ ನರಟ್ಟಿ ವಿಭಾಗೀಯ ಸಹನಿದರ್ೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು  ಬೆಳಗಾವಿ ವಿಭಾಗ ಬೆಳಗಾವಿ ಇವರು ನೇರವೆರಿಸಿ ಮಾತನಾಡುತ್ತಾ ಭಾರತ ದೇಶ ಈಗಾಗಲೇ ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಅರೋಗ್ಯ  ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದರೂ ಸಹ ಭಾರತ ದೇಶದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪ್ಘಾನಿಸ್ಥಾನಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿರುವದರಿಂದ ವಲಸಿಗರ ಮೂಲಕ ನಮ್ಮ ದೇಶಕ್ಕೆ ಹರಡುವ ಸಾಧ್ಯತೆ ಇರುವದರಿಂದ ಈ ಕಾರ್ಯಕ್ರಮವನ್ನು ಅತ್ಯಂತ ಜವಬ್ದಾರಿತವಾಗಿ ನಿರ್ವಹಿಸಬೇಕಾಗಿದ್ದು ಇದ್ದಕ್ಕೆ ಇಲ್ಲ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಇದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರಿ ಜಗದೀಶ ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ ಇವರು ಮಾತನಾಡಿ ರಾಷ್ಟ್ರೀಯ ಪಲ್ಸ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ವತಿಯಿಂದ ಎಲ್ಲ ಸಹಾಯ ಸಹಕಾರಗಳನ್ನು ನೀಡುವದಾಗಿ ತಿಳಿಸಿ ಎಲ್ಲ ಪಾಲಕರು ತಮ್ಮ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಇಂದೇ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿ ಭಾರತ ದೇಶವನ್ನು ಆರೋಗ್ಯವಂತ ರಾಷ್ಟ್ರವನ್ನಾಗಿಸಲು ಶ್ರಮಿಸುವಂತೆ ತಿಳಿಸಿದರು.

ಇನ್ನೂರ್ವ ಅತಿಥಿಗಳಾದ ಶ್ರೀ ಜಯಸಿಂಹ ರೋಟರಿಯನ್ ರೋಟರಿ ಕ್ಲಬ್ ಆಪ್ ಬೆಳಗಾಂ ಸೌತ ಇವರು ಮಾತನಾಡಿ ಪೋಲಿಯೋ ನಿಮರ್ೂಲನೆಗಾಗಿ ರೋಟರಿ ಸಂಸ್ಥೆ ಇಲ್ಲಿಯವರೆಗೆ ಸಹಕಾರ ನೀಡುತ್ತಾ ಬಂದಿದ್ದು ಇದನ್ನು ಮುಂದುವರಿಸಿಕೊಂಡು ಹೋಗುವದಾಗಿ ತಿಳಿಸಿ ದಿನಾಂಕ 19.01.2020 ರಂದು ತಮ್ಮ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ರೋಟರಿ ಪರವಾಗಿ ಸಾರ್ವಜನಿಕರಲ್ಲಿ ವಿನಂತಿಸಿದರು. 

ಸಮಾರಂಬದ ಅಧ್ಯಕ್ಷತೆ ವಹಿಸಿದ ಡಾ.ಶಶಿಕಾಂತ ವ್ಹಿ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಇವರು ಮಾತನಾಡಿ ಈ ದಿನದ ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲನೇ ದಿನ ಪೋಲಿಯೋ ಲಸಿಕಾ ಕೇಂದ್ರಗಳಲ್ಲಿ ಹಾಗೂ 2-3 ನೇ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆ ಬೇಟ್ಟಿನೀಡಿ ಲಸಿಕೆ ವಂಚಿತ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವರೆಂದು ತಿಳಿಸಿ ಎಲ್ಲ 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.

ವೇದಿಕೆಯ ಮೇಲೆ ಶ್ರೀ ಎಮ್.ಎಸ್.ರೋಟ್ಟಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೆಳಗಾವಿ ನಗರ, ಡಾ.ಪ್ರಕಾಶ ವಾಲಿ ವೈದ್ಯಾಧಿಕಾರಿಗಳು ನಗರ ಪ್ರಾತಮಿಕ ಆರೋಗ್ಯ ಕೇಂದ್ರ ವಡಗಾವ, ಕುಮಾರಿ ಸ್ವಾತಿ ಜಗಿಓ  ಮ್ಯಾನೇಜರ ಉಪಸ್ಥಿತರಿದ್ದರು.

ಉಪಸ್ಥಿತ ಗಣ್ಯರು ಸಾಂಕೇತಿಕವಾಗಿ 5 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು. 

ಪ್ರಾರಂಭದಲ್ಲಿ ಶ್ರೀಮತಿ ಪ್ರೇಮಾ ಜಡಗಿ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಸಕರ್ಾರಿ ಹೆಣ್ಣು ಮಕ್ಕಳ ಶಾಲೆ ವಡಗಾಂವಿಯ ವಿದ್ಯಾಥರ್ಿನಿಯರು ನಾಡಗೀತೆ ಹಾಡಿದರು.

ಡಾ.ಐ.ಪಿ ಗಡಾದ ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಅಧಿಕಾರಿಗಳು ಬೆಳಗಾವಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು 509892 ಮಕ್ಕಳನ್ನು ಗುರುತಿಸಿದ್ದು  2335 ಪೋಲಿಯೋ ಭೂತಗಳನ್ನು ಸ್ಥಾಪಿಸಲಾಗಿದೆ. ಪೋಲಿಯೋ ಲಸಿಕೆ ಹಾಕಲು 9954 ಕಾರ್ಯಕತರ್ೆಯರನ್ನು ಹಾಗೂ 199 ಮೇಲ್ವೀಚಾರಕರನ್ನು ನಿಯೋಜಿಸಲಾಗಿದೆ. ಅಲ್ಲದೇ 34 ಮೊಬೈಲ್ ತಂಡ (ಒಠಛಟಜ ಖಿಜಚಿಟ) ಗಳನ್ನು ರಚಿಸಲಾಗಿದೆ. ಹಾಗೂ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಖಿಡಿಚಿಟಿಣ ಭೂತಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು