ನವದೆಹಲಿ, ಅ. 13: ಹಾಲಿ ರನ್ನರ್ಸ್ ಅಪ್ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು 8-2್ಘ್ತದಿು ಭಾನುವಾರ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ, ಒಂಬತ್ತನೇ ಸುಲ್ತಾನ್ ಜೊಹೋರ್ ಕಪ್ನಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರಿಸಿದೆ.
ಭಾರತ ತಮ್ಮ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನು 4-2್ಘ್ತದಿು ಸೋಲಿಸಿತ್ತು. ಈಗ ನ್ಯೂಜಿಲೆಂಡ್ನ್ನು 8-2್ಘ್ತದಿು ಮಣಿಸಿತು.
ಭಾರತದ ಸತತ ಎರಡನೇ ಗೆಲುವಿನಲ್ಲಿ ಸಂಜಯ್ (17, 22ನೇ ನಿಮಿಷ), ದಿಲ್ಪ್ರೀತ್ ಸಿಂಗ್ (6 ನೇ ನಿಮಿಷ), ಶಿಲಾನಂದ್ ಲಕ್ರಾ (14 ನೇ ನಿಮಿಷ), ಮಂದೀಪ್ ಮೊರ್ (22 ನೇ ನಿಮಿಷ), ಸುಮನ್ ಬೆಕ್ (45 ನೇ ನಿಮಿಷ), ಪ್ರತಾಪ್ ಲಕ್ರಾ (50 ನೇ ನಿಮಿಷ) ಮತ್ತು ಸುದೀಪ್ ಚಿರ್ಮಕೋ (51 ನೇ ನಿಮಿಷ) ಗೋಲು ಗಳಿಸಿದರು. ಮುಗಿದಿದೆ. ನ್ಯೂಜಿಲೆಂಡ್ ಪರ ಡೈಲನ್ ಥಾಮಸ್ (28, 44 ನೇ ನಿಮಿಷ) ಎರಡೂ ಗೋಲು ಗಳಿಸಿದರು.
ಭಾರತ ಮುಂದಿನ ಮಂಗಳವಾರ ಜಪಾನ್ ವಿರುದ್ಧ ಆಡಲಿದೆ.