ಲೋಕದರ್ಶನ ವರದಿ
ಕಾಗವಾಡ 19: ಜೈನ ಹಾಗೂ ಜೈನೆತ್ತರ ಸಮಾಜದಲ್ಲಿಯ ಯುವಕರಿಗೆ ಮಾರ್ಗದರ್ಶನ ಮಾಡುತ್ತಾ ದುಷ್ಟ ಚಟಗಳಿಂದ ಪರಾವೃತ್ತಗೊಳಿಸಿ ಅನೇಕಕುಟುಂಬಗಳ ಮೇಲೆ ಒಳ್ಳೆಯ ಸಂಸ್ಕಾರ ಮಾಡಿ, ಮುನಿ ಜೀವನದಲ್ಲಿ ಅರ್ಧಕ್ಕಿಂತ ಹೆಚ್ಚು ಕಾಡಿನಲ್ಲಿ ಕಳೇದು ಜೈನ ಸಮಾಜದ ಅಹಿಂಸಾ ತತ್ವಗಳು ಸಾರಿ ಹೇಳಿದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರ ಅಂತ್ಯವಿಧಿ ಸಂಸ್ಕಾರ ಜುಗೂಳದಲ್ಲಿ ನೆರವೇರಿತು.
ಶನಿವಾರ ರಂದು ಜುಗೂಳ ಗ್ರಾಮದಲ್ಲಿ ಬೆಳಿಗ್ಗೆಸಾವಿರಾರು ಸಂಖ್ಯೆಯಿಂದ ಶ್ರಾವಕರು ಆಗಮಿಸಿದ್ದರು. ಸಾಧು ಸಮಾಧಿ ಮರಣ ಸಾಧಿಸಿದ ರಾಷ್ಟ್ರಸಂತ ಚಿನ್ಮಯಸಾಗರ ಮಹಾರಾಜರ ಪಾಥರ್ಿವ ಪುಷ್ಪಕ ರಥದಲ್ಲಿ ತೆಗೆದುಕೊಂಡು ಗಜ, ಕುದುರೆ, ಸಹವಾದ್ಯದೊಂದಿಗೆ ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಸ್ವಾಮೀಜಿಯವರ ಜನ್ಮಸ್ಥಾನ ಮೋಳೆ ಬಂಧುಗಳ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ಅಂತ್ಯ ಸಂಸ್ಕಾರ ಸಮಯದಲ್ಲಿ ನಾಂದಣಿ ಜಿನಸೇನ ಭಟ್ಟಾರಕ ಮಹಾರಾಜರು, ಕಾರ್ಕಳ್ಜೈನ ಮಠದ ಭಟ್ಟಾರಕರು,ಆಚಾರ್ಯ ಸೂರ್ಯಸಾಗರ, ಸುಮತಿಸಾಗರ, ಸಮರ್ಪಣಸಾಗರ, ಮೋಕ್ಷಸಾಗರ, ಅಜೀತಸೇನ ಮುನಿ ಮಹಾರಾಜರು, ಪ್ರಸಂಗಸಾಗರ, ಜ್ಞಾನಭೂಷಣ ಮುನಿ ಮಹಾರಾಜರು ಇವರು ವಿಧಿ ಮಂತ್ರೋಪಚಾರ ಮಾಡಿದರು.
ರಾಜಸ್ಥಾನ ಕೋಟಾದ ಉದ್ಯಮಿಗಳಾದ ವಿನೋದ ಜೈನ, ಅಭಿಷೇಕ ಜೈನ ಕುಟುಂಬದವರಿಂದ ಅಗ್ನಿ ಸ್ಪರ್ಶ ಮಾಡಿದರು.ಅಂತ್ಯ ಯಾತ್ರೆಯಲ್ಲಿ ಹೊಸ ದೆಹಲಿಯ ಪವನ ಜೈನ, ನವೀನ ಜೈನ, ಅರುಣ ಜೈನ(ಕಟೋಲೆ), ರಾಜೇಂದ್ರ ಜೈನ ಕುಟುಂಬದವರು ಪಾರ್ಥಿವಕ್ಕೆ ಹೆಗಲು ಕೊಟ್ಟರು.ಅಂತ್ಯ ಸಂಸ್ಕಾರದಲ್ಲಿ ಚಂದನದ ಕಟ್ಟಿಗೆಗಳು, ಕೊಬ್ಬರಿ, ಕರಪುರ, ಹಾಲು, ತುಪ್ಪ, ಖಾರಿಕ, ಕಶಾಯ ಬಳಿಸಿ ಅಭಿಷೇಕ ಮಾಡಿ ಶವ ಅಂತ್ಯಸಂಸ್ಕಾರಗೊಳಿಸಲಾಯಿತು.
ಜುಗೂಳ ಜೈನ ಸಮಾಜದ ಆಧ್ಯಕ್ಷ ಶ್ರೇಣಿಕ ಅಕ್ಕೋಳೆ, ಅರುಣ ಗಣೇಶವಾಡಿ, ಮತ್ತು ಸ್ವಾಮೀಜಿಯವರ ಮೋಳೆ ಪರಿವಾರ ಇವರಿಂದ ಪಾರ್ಥಿವಕ್ಕೆ ಅಭಿಷೇಕ, ಪ್ರಕಾಶ ಮೋದಿ, ಸುಮನಲತಾ ಮೋದಿ ಇವರ ಕುಟುಂಬದಿಂದ ಭೂಮಿಶುದ್ಧಿ ಮಾಡಿದರು.
ಚಿನ್ಮಯ ಸ್ಮಾರಕ:
ಜುಗೂಳ ಸಮಾಜ ಸಂಘಟನೆ ಹಾಗೂ ದಿಲ್ಲಿ ಉದ್ಯಮಿಗಳ ಸಮುಖದಲ್ಲಿ ಚಿನ್ಮಯಸಾಗರ ಟ್ರಸ್ಟ್ ಹೆಸರಿನಲ್ಲಿ ಚಿನ್ಮಯ ಆಸ್ಪತ್ರೆ ಸ್ಥಾಪಿಸುವುದು ಘೋಷಣೆ ಮಾಡಲಾಯಿತು. ಎಲ್ಲ ಉಪಚಾರಿಸುವ ವ್ಯವಸ್ಥೆ ಕೇವಲ 10 ರೂ.ಗಳಲ್ಲಿ ಮಾತ್ರ ನೀಡುವುದು ಗುರಿ ವ್ಯಕ್ತಪಡಿಸಿದರು. ಆಸ್ಪತ್ರೆ ಕಟ್ಟಿಸಲು ಸುಮಾರು 1 ಕೋಟಿ ರೂ. ವೆಚ್ಚುವಾಗುತ್ತದೆ ಎಂದು ಹೇಳಿದಾಗ ಅನೇಕ ಉದ್ಯಮಿಗಳು ಇದಕ್ಕೆ ಧನಸಹಾಯ ನೀಡಲು ಮುಂದಾಗಿದರು. ಮೊದಲನೇ ಪುಣ್ಯತಿಥಿ ಆಸ್ಪತ್ರೆಯ ಭವನದಲ್ಲಿ ಮಾಡುವ ಗುರಿ ಆಚಾರ್ಯ ಚಂದ್ರಪ್ರಭು ಮುನಿ ಮಹಾರಾಜರು, ಸೌರಭಸೇನ ಭಟ್ಟಾರಕ ಮಹಾರಾಜರು ಘೋಷಣೆ ಮಾಡಿದರು.
ವೀರ ಸೇವಾದಳ ಸೇವಕನಾಗಿ ಧರ್ಮಸೇವೆ ಮಾಡುತ್ತಾ ಮುನಿದಿಕ್ಷೆ ಪಡೆದು, ಸಂಪೂರ್ಣ ದೇಶದಲ್ಲಿ ರಾಷ್ಟ್ರಸಂತರೆಂದು ಹೆಸರಾಂತರಾಗಿ ಅನೇಕರ ಸುಖ-ದುಃಖದಲ್ಲಿ ಪಾಲ್ಗೊಂಡು ಚಿನ್ಮಯಸಾಗರ ಮುನಿ ಮಹಾರಾಜರು ನಮ್ಮೆಲ್ಲರಿಗೆ ದಾರಿ ದೀಪರಾಗಿದ್ದಾರೆ ಎಂದು ಸೌರಭಸೇನ ಭಟ್ಟಾರಕ ಮಹಾರಾಜರು ಹೇಳಿದರು.
ಕರ್ನಾಟಕದ ಗಡಿ ಗ್ರಾಮ ಜುಗೂಳ ಗ್ರಾಮದಲ್ಲಿ ಸಂಪೂರ್ಣ ಭಾರತ ದೇಶದಲ್ಲಿ ಸಂಚರಿಸಿ, ಜೈನ ಸಮಾಜದ ಅಹಿಂಸಾ ತತ್ವಗಳು ಸಾರಿ ಹೇಳಿದ್ದ ಚಿನ್ಮಯಸಾಗರ ಮಹಾರಾಜರು ಮಹಾನ ಸಂತರು. ಇವರಿಂದ ಈ ಗ್ರಾಮದ ಹೆಸರು ಇಡೀ ವಿಶ್ವದಲ್ಲಿ ಖ್ಯಾತಿ ಪಡೆದಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ ಕವಟಗಿಮಠ ಹೇಳಿದರು.
ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ದಕ್ಷಿಣ ಭಾರತ ಜೈನ ಸಭೆಯ ಆಧ್ಯಕ್ಷ ರಾವಸಾಹೇಬ ಪಾಟೀಲ, ಕೆಂಪವಾಡ ಸಕ್ಕರೆ ಕಾರ್ಖಾನೆ ಎಂ.ಡಿ. ಶ್ರೀನಿವಾಸ ಶ್ರೀಮಂತ ಪಾಟೀಲ, ಜುಗೂಳ ಪಿಕೆಪಿಎಸ್ ಆಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಸಾಗರ ಚೌಗುಲೆ, ಬಿ.ಎ.ಪಾಟೀಲ, ಅರುಣ ಯಲಗುದ್ರಿ, ಪೊಲೀಸ್ ನೀರಿಕ್ಷಕ ಶಂಕರಗೌಡಾ ಪಾಟೀಲ, ಶಿರಗುಪ್ಪಿ ಪಿಕೆಎಪಿಎಸ್ ಆಧ್ಯಕ್ಷ ಅಭಯ ಅಕಿವಾಟೆ, ಗ್ರಾಪಂ ಆಧ್ಯಕ್ಷ ಸಂಜಯ ಮಿಣಚೆ, ಪಿಎಸ್ಐ ಹನಮಂತ ಶಿರಹಟ್ಟಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಅನೇಕ ಉದ್ಯಮಿಗಳು ಪಾಲ್ಗೊಂಡಿದ್ದರು.