ಜೋಳದ ಬೆಳೆ ಕ್ಷೇತ್ರೋತ್ಸವ

Jowar crop field festival

ಹಾವೇರಿ 21:    ಹಾವೇರಿ ತಾಲೂಕು ಕೃಷಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ  ಕಬ್ಬೂರ ಗ್ರಾಮದ ಕರಬಸಪ್ಪ ಹೊಸಳ್ಳಿ ಎಂಬ ರೈತರ ಹೊಲದಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಜೋಳದ ಬೆಳೆಯಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಗುರುವಾರ ಜರುಗಿತು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಬ್ಬೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ ಮಾತನಾಡಿ, ವಿಜ್ಞಾನಿಗಳು ನೀಡುವ ಸಲಹೆಗಳನ್ನು ಪಾಲಿಸಬೇಕು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದು, ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  

ಸಹಾಯಕ ಕೃಷಿ ನಿರ್ದೇಶಕರಾದ ವೀರಭದ್ರ​‍್ಪ ಬಿ.ಹೆಚ್‌. ಮಾತನಾಡಿ, ಮಳೆ ವಿವರ, ರಸಗೊಬ್ಬರಗಳ ಬಳಕೆ, ತುಂತುರು ನೀರಾವರಿ, ಕೃಷಿಭಾಗ್ಯ ಇನ್ನಿತರ ಯೋಜನೆಗಳ ಬಗ್ಗೆ ವಿವಾರವಾಗಿ ತಿಳಿಸಿದರು ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ  ಮಾಡಿಕೊಂಡರು. 

ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ವಿಜ್ಞಾನಿ ಡಾ. ರಷ್ಮಿ ಸಿ.ಎಂ ಅವರು, ಮಣ್ಣಿನ ಮಹತ್ವ ಮತ್ತು ಸಂರಕ್ಷಣೆ, ಮಣ್ಣು ಪರೀಕ್ಷೆ ವಿಧಾನ, ಪ್ರಯೋಗಾಲಯಕ್ಕೆ ಸಲ್ಲಿಸುವ ಬಗೆ ಹಾಗೂ ರಸಗೊಬ್ಬರಗಳ ಬಳಕೆ ಕುರಿತು, , ಸಹಾಯಕ ಕೃಷಿ ನಿರ್ದೇಶಕರಾದ ಮೈತ್ರಿ ವಿನೋದಾ ಅವರು  ಕೃಷಿ ಬೆಳೆಗಳಲ್ಲಿನ ಕೀಟಬಾಧೆ ಮತ್ತು ರೋಗಬಾದೆ, ಮುಂಜಾಗೃತ ಕ್ರಮ ಬಗ್ಗೆ, ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಅವರು ರೈತ ಸಂಪರ್ಕ ಕೇಂದ್ರದಿಂದ ವಿತರಿಸುವ ಪರಿಕರಗಳು ಹಾಗೂ ಇತರೆ ಯೋಜನೆಗಳ ಕುರಿತು  ಮಾಹಿತಿ ನೀಡಿದರು. 

ಸಂಪನ್ಮೂಲ ವ್ಯಕ್ತಿ  ನಾಗರಾಜ ಹಿರೇಮಠ   ಅವರು, ಗುಡಿ ಕೈಗಾರಿಕೆ, ಬ್ಯಾಂಕ್ ಲೋನ್ ಹಾಗೂ ಆದಾಯಗಳಿಸುವಿಕೆ ಬಗ್ಗೆ  ಮಾತನಾಡಿದರು.  

ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ, ಬಸವರಾಜ ಜಾಡರ, ಅಡಿವೆಪ್ಪ ಕಾಳಪ್ಪನವರ, ರಾಜು, ನಾಗೇಂದ್ರ​‍್ಪ ಕೆಂಗೊಂಡ, ಪ್ರಗತಿ ಪರ ರೈತರು ರೈತ ಮಹಿಳೆಯರು ಹಾಗೂ ಕೃಷಿ ಸಖಿಯರು ಪಾಲ್ಗೊಂಡಿದ್ದರು. ಚಂದ್ರಶೇಖರ ಎಸ್‌.ಕೆ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.