ಕಾಗವಾಡ: ಪತ್ರಕರ್ತರ ಕಾರ್ಯ ಅಪಾರ: ನ್ಯಾಯವಾದಿ ಅಕಿವಾಟೆ

ಲೋಕದರ್ಶನ ವರದಿ

ಕಾಗವಾಡ 06:  ದೇಶದ ಆಗುಹೋಗುಗಳಲ್ಲಿ, ಅಭಿವೃದ್ಧಿಯಲ್ಲಿ, ತಪ್ಪಿದಲ್ಲಿ ಕಿವಿ ಹಿಂಡುವರು ಪತ್ರಿಕೆ ಮತ್ತು ಮಾಧ್ಯಮದ ಬಂಧುಗಳು. ಸಂವಿಧಾನದ 4ನೇ ಸ್ಥಂಬವೆಂದು ಗುರುತಿಸಲಾಗಿದೆ. ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಪತ್ರಕರ್ತರ ಕಾರ್ಯ ಅಪಾರವಿದೆವೆಂದು ಅಥಣಿ ಕೃಷ್ಣಾ ಸಕ್ಕರೆ ಕಾಖರ್ಾನೆ ಮಾಜಿ ಉಪಾಧ್ಯಕ್ಷ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ ಶಿರಗುಪ್ಪಿಯಲ್ಲಿ ಹೇಳಿದರು.

ಸೋಮವಾರರಂದು ಶಿರಗುಪ್ಪಿಯ ನರಸಿಂಹ ಮಂದಿರದ ಸಭಾ ಭವನದಲ್ಲಿ ಕಾಗವಾಡ ತಾಲೂಕಾ ಕಾರ್ಯನಿರತ ಪತ್ರಕರ್ತರ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಅಭಯಕುಮಾರ ಅಕಿವಾಟೆ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಗವಾಡ ತಾಲೂಕಿನಲ್ಲಿ ಆಗುಹೋಗ ಎಲ್ಲ ಘಟನೆಗಳಲ್ಲಿ ಇಲ್ಲಿಯ ಪತ್ರಕರ್ತರು ನಿಸ್ವಾರ್ಥ ಸೇವೆ ಸಲ್ಲಿಸಿ ಸಹಕರಿಸುತ್ತಿದ್ದಾರೆ. ರೈತರ ಸಮಸ್ಯೆಗಳು ಮಂಡಿಸಿ ನ್ಯಾಯ ವದಿಗಿಸಲು ಸೇವೆ ಅಪಾರವಿದೆ ಎಂದು ಹೇಳಿದರು.

ಕಾಗವಾಡ ರೈತ ಸಂಘಟನೆ ಮುಖಂಡರಾದ ಸುರೇಶ ಚೌಗುಲೆ ಮಾತನಾಡುವಾಗ, ಇಲ್ಲಿಯ ಪತ್ರಕರ್ತರು ರೈತರ ಪರ ಸಮಸ್ಯೆಗಳಿಗೆ ಸ್ಪಂದಿಸಿ ನೀಡಿರುವ ಸಹಕಾರದಿಂದ ರೈತರಿಗೆ ಅಪಾರ ಸಹಾಯವಾಗಿದೆ. ಮಾಧ್ಯಮದಿಂದ ಸಮಸ್ಯೆಗಳು ಭಗಿಹರಿಯುತ್ತಿವೆ ಎಂದು ಹೇಳಿದರು.

ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಆಧ್ಯಕ್ಷತೆ ಪ್ರಭಾಕರ ಗೊಂಧಳಿ ವಹಿಸಿದ್ದರು. ಶಿರಗುಪ್ಪಿ ಗ್ರಾಮ ಪಂಚಾಯತಿ ಆಧ್ಯಕ್ಷ ಈಕ್ಬಾಲ್ ಕನವಾಡೆ, ಜುಗೂಳ ಮಾಜಿ ಗ್ರಾಪಂ ಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಎಪಿಎಂಸಿ ಮಾಜಿ ಆಧ್ಯಕ್ಷ ಅನೀಲ ಕಡೋಲೆ, ಭೀಮು ಅಕಿವಾಟೆ, ಜಿನಪ್ಪಾ ಚೌಗುಲಾ ಕೋ-ಆಪ್ ಬ್ಯಾಂಕ್ ಆಧ್ಯಕ್ಷ ಬೊಮ್ಮನ್ನಾ ಚೌಗುಲೆ, ವಿಜಯ ಅಕಿವಾಟೆ, ತಾಪಂ ಸದಸ್ಯ ಶಶೀಕಾಂತ ಶಿರಗಾಂವೆ, ಹೆಸ್ಕಾಂ ಅಧಿಕಾರಿ ಬಿ.ಎ.ಗಣೆ, ಮಹಾವೀರ ಕಾತ್ರಾಳೆ, ರಮಾಕಾಂತ ಬಾಡಗೆ, ಡಾ. ಅಮೋಲ ಸರಡೆ, ಸೇರಿದಂತೆ ಅನೇಕರು ಇದ್ದರು.

ಪತ್ರಕರ್ತರಾದ ಸುಕುಮಾರ ಬನ್ನೂರೆ ಸ್ವಾಗತಿಸಿದರು. ಲಕ್ಷ್ಮಣ ಸೂರ್ಯಂವಶಿ ಪ್ರಾಸ್ತಾವಿಸಿದರು. ರಂಗನಾಥ ದೇಶಿಂಗಕರ ಬಾಳಶಾಸ್ತ್ರೀ ಜಾಂಬೇಕರ ಇವರ ಪರಿಚಯ ನೀಡಿದರು. ಬಸವರಾಜ ತಾರದಾಳೆ, ಸಂದೀಪ ಕಾಕಟರ, ಸಂದೀಪ ಪರಾಂಜಪೆ, ಕುಮಾರ ಪಾಟೀಲ, ಸಿದ್ದಯ್ಯಾ ಹಿರೇಮಠ, ರಾಜು ಇಂಗಳಗಾಂವೆ, ಅಭಿನಂದನ ಸುಂಕೆ, ಸೇರಿದಂತೆ ಅನೇಕರು ಇದ್ದರು.

****