ಬೆಳಗಾವಿ 10; ಹಿರಿಯ ಪತ್ರಕರ್ತ ಶಾಹೀದ ಧಾರವಾಡಕರ ಅವರು ಶುಕ್ರವಾರ ಬೆಳಿಗ್ಗೆ ಗೋಕಾಕದ ಬಣಗಾರ ಓಣಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಹಿಂದೆ ಪತ್ನಿ ,ಇಬ್ಬರು ಪುತ್ರರು, ಇಬ್ಬರು ಪುತ್ರಿಯರು , ನಾಲ್ವರು ಸಹೋದರರು, ಮೂವರು ಸಹೋದರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ.
ದಿವಂಗತರು ನಾಡೋಜ ದಿನಪತ್ರಿಕೆ ಮತ್ತು ಜೋಹರ್ ಎ- ಗುಫ್ತಾರ್ ದಿನಪತ್ರಿಕೆಯ ಸಂಪಾದಕ ಎಸ್.ಬಿ. ಧಾರವಾಡಕರ , ಸಮದರ್ಶಿ ದಿನಪತ್ರಿಕೆಯ ಸಂಪಾದಕ ಎ.ಬಿ. ಧಾರವಾಡಕರ ಮತ್ತು ರಾಜಕೀಯ ಮೌಲ್ಯ ದಿನಪತ್ರಿಕೆ ಸಂಪಾದಕ ಪಿ.ಬಿ .ಧಾರವಾಡಕರ ಇವರುಗಳ ಹಿರಿಯ ಸಹೋದರರಾಗಿದ್ದಾರೆ.
ಹಲವಾರು ವರ್ಷಗಳ ಕಾಲ ವಿಜಯಪುರದಲ್ಲಿ ಸೇವೆ ಸಲ್ಲಿಸಿದ್ದ ಇವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಮತ್ತು ಬೆಳಗಾವಿ ಜಿಲ್ಲೆಯ ಸಮಸ್ತ ಪತ್ರಿಕಾ ಬಳಗದವರು ಸಂತಾಪ ವ್ಯಕ್ತಪಡಿಸಿ ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
ದಿವಂಗತರ ನಿಧನದಿಂದ ಅವರ ಸಮಸ್ತ ಪರಿವಾರದವರಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಪ್ರಾರ್ಥಿಸಿದ್ದಾರೆ.