ಪತ್ರಕರ್ತ ಸಿ.ಎ.ಇಟ್ನಾಳಮಠಗೆ ಸನ್ಮಾನ

ಲೋಕದರ್ಶನ ವರದಿ

ಅಥಣಿ 24: ಬದುಕಿನ ಸ್ವಾರ್ಥಕತೆ ಸಮಾಜ ಸೇವೆಯ ಮೇಲೆ ಇದೆ. ಆ ಸೇವೆ ವಿವಿಧ ರೂಪದಾಗಿರುತ್ತದೆ ಅಥಣಿ ಶೇಟ್ಟರಮಠದ ಮರುಳಸಿದ್ದ ಸ್ವಾಮೀಜಿ ಅವರು ಹೇಳಿದರು.

ಗುರುವಾರ ಸಂಜೆ ಅಥಣಿ ಶೇಟ್ಟರಮಠದಲ್ಲಿ ಜಂಗಮ ಸಮಾಜದಿಂದ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ವಿಜೇಯತ ಪತ್ರಕರ್ತರ ಸಿ.ಎ.ಇಟ್ನಾಳಮಠ ಅವರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಯಾವದೆ ವ್ಯಕ್ತಿ ಸಮಾಜದ ಅವಿಭಾಜ್ಯ ಅಂಗ ಸಮಾಜ ತನಗೆ ಏನೂ ಕೋಟ್ಟಿದೆ ಮಹತ್ವದಲ್ಲ. ಸಮಾಜಕ್ಕೆ ಅವನು ಏನೂ ನೀಡಿದ್ದಾನೆ ಅದು ಮಹತ್ವದಾಗಿರುತ್ತದೆ. ನಾವು ನಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನಾದರೂ ಸಮಾಜ ಸೇವೆಗೆ ಮಿಸಲಾಗಿಡಬೇಕು ಎಂದು ಹೇಳಿದರು.

ಇಟ್ನಾಳಮಠ ಸಾಧನೆ ಹಿಂದೆ ಅಥಣಿ ಶ್ರೀಶಿವಯೋಗಿ ಮರುಳಶಂಕರ ದೇವರ ಕ್ರಪಾರ್ಶಿವಾದ ಇದ. ಇವರಿಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಪ್ರಶಸ್ತಿ ಸಿಗಲಿ ಎಂದು ಹೇಳಿ ಆಶಿವದಿಸಿದರು.

ಸಮಾರಂಭದಲ್ಲಿ ಶಿವಮೂರ್ತಯ್ಯಾ ಮಠಪತಿ ಮತ್ತು ಎಮ್.ಎನ್.ಚಿಂಚೋಳಿ ಅವರು ಕಳೆದ ಮೂರು ದಶಕಗಳಿಂದ ಸಿ.ಎ.ಇಟ್ನಾಳಮಠರ ಪತ್ರಿಕಾ ವರದಿಗಾರರಾಗಿ ಸೇವೆ ಮಾಡುತ್ತಿರುವದನ್ನು ವಿವರಿಸಿದರು. ಸೇವೆ ಅಂತ ಬಂದಾಗ ಅವರು ಜಾತಿ ಸೀಮೆ ದಾಟಿ ಸತ್ಯದ ಪರ ವರದಿಗಾರರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳು ಸಿಗಲಿ ಎಂದು ಹೇಳಿದರು.

ಪ್ರಶಸ್ತಿ ವಿಜೇಯತ ಸಿ.ಎ.ಇಟ್ನಾಳಮಠ ಅವರು ಮಾತನಾಡಿ ಸಮಾಜದವರು ಸನ್ಮಾನ ಮಾಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ನನ್ನ ಬೆಳಗವಣಿಗೆಯ ಹಿಂದೆ ಶ್ರೀ ಶಿವಯೋಗಿ ಮರುಳಶಂಕರ ದೇವರ ಆಶರ್ಿವಾದ ಇದೆ. ಅದಲ್ಲದೆ ನನಗೆ ಸಿಕ್ಕಿರುವ ಪ್ರಶಸ್ತಿ ಕನ್ನಡ ಪ್ರಭ ಇಂಡಿಯನ್ ಎಕ್ಸಪ್ರಸ್ ಪತ್ರಿಗೆ ಮತ್ತು ವಿಮೋಚನಾ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.

      ಸಮಾರಂಭದ ಅತಿಥಿಗಳಾಗಿ ಈರಯ್ಯಾ ಜಗದಾಳಮಠ, ಪಂಚಾಕ್ಷರಯ್ಯಾ ಅಳ್ಳಿಮಟಿ,ಅಶೋಕ ಅಳ್ಳಿಮಟ್ಟಿ, ಶಿವಪ್ರಸಾದ (ಪುಟ್ಟು) ಹಿರೇಮಠ, ಎಮ್.ಎನ್.ಚಿಂಚೋಳಿ, ನಿವ್ರತ್ತಿ ಕೃಷಿ ಇಲಾಖೆ ಅಧಿಕಾರಿ ಶಿವಮೂರ್ತಯ್ಯಾ ಮಠಪತಿ ,ಜಗದೀಶ ಎಮ್. ಹಿರೇಮಠ ಚಿಕ್ಕಯ್ಯಾ ಹಿರೇಮಠ, ಜಗದೀಶ.ಎನ್.ಹಿರೇಮಠ, ಶಿವು ತೆಲಸಂಗ  ಮುಂತಾದವರು ಆಗಮಿಸಿದ್ದರು.

  ಶರಣಯ್ಯಾ ವಸ್ತ್ರದ ಸ್ವಾಗತಿಸಿದರು. ಶಿವಪ್ರಸಾದ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸಂಗು ಕಲ್ಮಠ ವಂದಿಸಿದರು.