ಸ್ತ್ರಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಲು ಜೋಶಿ ಕರೆ

Joshi calls on women to come and achieve in the mainstream of society

ತಾಂಬಾ 19: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಪುರುಷರ ಅಧೀನದಲ್ಲಿದ್ದ ಕಾಲಕ್ಕೂ ಇಂದಿನ ಕಾಲದ ವಾತವರಣಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಂದು ಸ್ತ್ರಿ ಸ್ವಾವಲಂಬಿಯಾಗಿ ಸ್ವತಂತ್ರವಾಗಿ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಲು, ಸಮಾಜದ ಮುಖ್ಯವಾಹಿನಿಗೆ ಮುಂದೆ ಬಂದು ಸಾಧನೆ ಮಾಡಲು ವಿದ್ಯಾರ್ಥಿನಿಯರಿಗೆ ಜೆಂಡರ್ ಸ್ಪೆಷಾಲಿಸ್ಟ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಯಶೋಧ ಜೋಶಿ ಕರೆ ನೀಡಿದರು. 

ಗ್ರಾಮದ ಶ್ರೀ ಎಸ್‌.ಆರ್‌.ಮಾಳಗೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಮಹಿಳಾ ಸಬಲೀಕರಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜೀವನವೆಂಬ ಜೋಕಾಲಿಯಲ್ಲಿ ಕಷ್ಟ-ಸುಖಗಳು ಸಹಜ ಎರಡನ್ನು ಸಮಾನವಾಗಿ ಸ್ವೀಕರಿಸಿ ಸಂಸಾರವೆಂಬ ಬಾಳಿನ ಬಂಡಿಯನ್ನು ಯಶಸ್ವಿಯಾಗಿ ದಡ ಸೇರುವವಳೇ ನಿಜವಾದ ಮಹಿಳೆ. ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಲ್ಲ, ಅವಳಲ್ಲು ಪ್ರತಿಭೆಗಳಿರುತ್ತವೆ. ಅವುಗಳನ್ನು ಸೂಕ್ತ ಸಮಯದಲ್ಲಿ ಹೊರ ಹಾಕುವಲ್ಲಿ ಪುರುಷರು ಮಹಿಳೆಯರಿಗೆ ಪ್ರೋತ್ಸಾಹಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿದ ಎಸ್‌.ಆರ್‌.ಮಾಳಗೆ ಕಾಲೇಜಿನ ಪ್ರಾಚಾರ್ಯ ಆರ್‌.ಎಸ್‌.ಬೋಳೆಗಾಂವ ಮಾತನಾಡಿ ಮಹಿಳೆಯರು ಕೌಟುಂಬಿಕ ಸರಕಾಗದೆ ಕುಟುಂಬ ಬೆಳವಣಿಗೆಯ ಜೊತೆಯಲ್ಲಿ ಉದ್ಯಮಿ ಯಾಗು, ಉದ್ಯೋಗ ನೀಡು, ಸೇವಾ ವಲಯದಲ್ಲೂ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ ಸಾಮಾಜಿಕವಾಗಿ ಪ್ರಬಲರಾಗಿ ಪ್ರೇರಣಾ ಶಕ್ತ ಆಗಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಬೆಳೆಯುವ-ಬೆಳೆಸುವ ಮನೋಧರ್ಮ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರೊ.ಎಸ್ ಐ ವಾಲಿಕಾರ ಪ್ರಸ್ತಾವಿಕವಾಗಿ ಮಾತನಾಡಿದರು. 

ಸಂಸ್ಥೆಯ ಚೇರ್ಮನ್ ಆಯ್‌.ಬಿ.ಕಿಣಗಿ ಹಾಗೂ ಕಾರ್ಯದರ್ಶಿಗಳಾದ ಎ.ಬಿ.ಕುಲಕರ್ಣಿ ಜಂಟಿಯಾಗಿ ಉದ್ಘಾಟಿಸಿದರು. ಪ್ರೊ. ಎಸ್‌.ಕೆ.ಬಿರಾದರ, ಪ್ರೊ. ಎಸ್‌.ಎಮ್‌.ಬಿರಾದಾರ, ಪ್ರೊ. ಜಿ.ಎಚ್‌.ಮುಂಜಿ ಪ್ರೊ. ಎಸ್‌.ಜಿ.ಪಾಟೀಲ, ಬಿ.ಎಸ್‌.ಅವಟಿ, ಬಿ.ಓ.ಮೂಲಿಮನಿ, ಬಿ.ಎಸ್‌.ಪೂಜಾರಿ ಎಸ್‌.ಎಸ್‌.ಕನ್ನಾಳ, ಜಿ.ಎಸ್‌.ಐಹೊಳೆ, ಎಮ್‌.ಬಿ.ಅಂಗಡಿ, ಎಸ್‌.ಎಲ್‌.ಅಡವಿ, ಆರ್‌.ವಿ.ಆಳೋರ ಸೆರಿದಂತೆ ಮತ್ತಿತರರು ಇದ್ದರು. 

ವಿದ್ಯಾರ್ಥಿನಿ ರೇಖಾ ಜಿಡ್ಡಿಮನಿ ಮತ್ತು ವಿಜಯಲಕ್ಷ್ಮೀ ಪ್ಯಾಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಪ್ರೊ.ಎಸ್‌.ಐ.ವಾಲಿಕರ ಸ್ವಾಗತಿಸಿದರು.  ಎ.ಎಮ್‌.ಸೋಮನಿಂಗ ನಿರೂಪಿಸಿದರು. ಡಾ. ಎಚ್‌.ಆರ್‌.ಹೊನ್ನಳ್ಳಿ ವಂದಿಸಿದರು