ಜಿಲ್ಲಾಧಿಕಾರಿಗಳ ಜಂಟಿ ಕಾರ್ಯಾಚರಣೆ ಅಕ್ರಮ ಮರಳುಗಾರಿಕೆ ಬೋಟ್ ಗಳ ವಶ, ಇಬ್ಬರು ಸೆರೆ

ಹಾವೇರಿ: ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಕುರಿತಂತೆ ಹಾವೇರಿ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗಳು ಬುಧವಾರ ಜಂಟಿ ಕಾಯರ್ಾಚರಣೆ ನಡೆಸಿ ಪರಿಶೀಲನೆ ನಡೆಸಿದರು.

ಕಂಚಾರಗಟ್ಟಿ, ಹರಳಹಳ್ಳಿ, ಚೌಡದಾನಪುರ, ಚಂದಾಪುರ ಗ್ರಾಮಗಳ ನದಿ ಪಾತ್ರದಲ್ಲಿ ಪರಿಶೀಲನೆ ನಡೆಸಿದ ಅವರು ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಒಂಭತ್ತು ಕಬ್ಬಿಣದ ಬೋಟ್ ಹಾಗೂ 12 ಬಿದಿರು ತೆಪ್ಪಗಳನ್ನು ವಶಪಡಿಸಿಕೊಂಡರು ಹಾಗೂ ಅಕ್ರಮದಲ್ಲಿ ತೊಡಗಿದ ಎರಡು ಜನ ಬಿಹಾರಿ ಮೂಲದ ವ್ಯಕ್ತಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು.

ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಾವೇರಿ ಅಧಿಕಾರಿ ಪುಷ್ಪಲತಾ, ಬಳ್ಳಾರಿ ಅಧಿಕಾರಿ ಮಹಾವೀರ ಉಪಸ್ಥಿತರಿದ್ದರು.