ಲೋಕದರ್ಶನ ವರದಿ
ರಾಣೇಬೆನ್ನೂರು29: ಮನುಷ್ಯ ಇಂದಿನ ಯಾಂತ್ರಿಕ ಒತ್ತಡದ ಬದುಕಿನಲ್ಲಿ ಹಲವಾರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾನೆ ಅದಕ್ಕೆ ಪೂರ್ವದಲ್ಲಿ ವೈದ್ಯರ ಸಲಹೆ ಸೂಚನೆ ಪಡೆದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಆರೋಗ್ಯ ಪೂರ್ಣ ಜೀವನ ಸಾಗಿಸಬಹುದು ಎಂದು ಡಾ|| ಬಸವರಾಜ ಕೇಲಗಾರ ಹೇಳಿದರು.
ನಗರದ ಎಸ್ಎಸ್ಐಎಂಎಸ್ ಸ್ಪರ್ಷ ಆಸ್ಪತ್ರೆ ಮತ್ತು ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ ಸ್ಥಳೀಯ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಕೀಲು-ಮೂಳೆ ಸಮಸ್ಯೆಗಳಿಗೆ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಲ್ಲಿ ವಯಸ್ಸಿಗೆ ಅನುಗುಣವಾಗಿ ಕೀಲು ನೋವು, ಮೋಣಕಾಲು ನೋವು, ಭುಜದ ನೋವು, ಸ್ಪೋಟ್ರ್ಸ ಇಂಜುರೀಸ್ ಕಾಣಿಸಿಕೊಳ್ಳುವುದು ಸಹಜ ಆದರೆ ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರ ಸಲಹೆ ಪಡೆದರೆ ಶೀಘ್ರ ಗುಣಮುಖರಾಗಬಹುದು ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ವಿರೇಶ ಹನಗೋಡಿಮಠ ಮಾತನಾಡಿ, ರೋಟರಿ ಸಂಸ್ಥೆಯು ಕಳೆದ 5 ದಶಕಗಳಿಂದ ಶೈಕ್ಷಣಿಕವಾಗಿ ಮತ್ತು ಆರೋಗ್ಯದ ದೃಷ್ಠಿಯಿಂದ ಬಡವರ, ದೀನದಲಿತರಿಗಾಗಿ ಹೊರೆಯಾಗಬಾರದೆಂದು ಉಚಿತ ಕಣ್ಣಿನ ತಪಾಸಣೆ, ರಕ್ತದೊತ್ತಡ ತಪಾಸಣೆ, ಮಹಿಳೆಯರಿಗೆ ಸೂಕ್ತ ಚಿಕಿತ್ಸೆ, ಶಿಕ್ಷಕರಿಗೆ ತರಭೇತಿ ಕಾಯರ್ಾಗಾರ, ಚರ್ಮ ರೋಗ ಚಿಕಿತ್ಸೆಗಳಿಗೆ ಉಚಿತ ತಪಸಣಾ ಶಿಬಿರ ಏರ್ಪಡಿಸಿ ಆರೋಗ್ಯವಂತ ಸಮಾಜ ನಿಮರ್ಾಣ ಮಾಡುವಲ್ಲಿ ಶ್ರಮಿಸುತ್ತಾ ಜನೋಪಯೋಗಿ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ 600 ಕ್ಕೂ ಹೆಚ್ಚು ಶಿಭಿರಾಥರ್ಿಗಳು ಶಿಬಿರದಲ್ಲಿ ಭಾಗವಹಿಸಿ ತಪಾಸಣೆಗೆ ಒಳಗಾದರು. ಡಾ. ಸಚಿನ್ ನಿಂಬರಗಿ, ಡಾ. ಶ್ರೀನಾಥ ಎಸ್.ಎನ್, ಡಾ|| ಆರ್.ಬಿ.ಮುಡದ್ಯಾವಣ್ಣನವರ, ಡಾ|| ಎಚ್.ಎಸ್.ಬೆಳವಿಗಿ, ಡಾ|| ವಿನಾಯಕ ಹಿರೇಗೌಡ್ರ, ಡಾ|| ಲತಾ ಕೇಲಗಾರ, ಡಾ|| ಶ್ವೇತಾ ಹಿರೇಗೌಡ್ರ, ಇನ್ನರ್ ವೀಲ್ ಅಧ್ಯಕ್ಷಿಣಿ ರಾಜೇಶ್ವರಿ ಹನಗೋಡಿಮಠ, ಕಾರ್ಯದಶರ್ಿ ಸುಮಾ ಹೊಟ್ಟಿಗೌಡ್ರ, ರೋಟರಿ ಸಂಸ್ಥೆಯ ಕಾರ್ಯದಶರ್ಿ ಉಮೇಶ ಹೊನ್ನಾಳಿ, ಕೆ.ವಿ.ಶ್ರೀನಿವಾಸ, ಗದಿಗೆಪ್ಪ ಹೊಟ್ಟಿಗೌಡ್ರ, ರೋಹಿತ್ ಅಗರವಾಲ್, ವೀರನಗೌಡ್ರ ಪೊಲೀಸ್ಗೌಡ್ರ, ಈಶ್ವರ ಪಾಟೀಲ, ಶಂಕರಗೌಡ ಮಾಳಗಿ, ಕೆ.ವಿ.ಶ್ರೀನಿವಾಸ, ಸುಭಾಸ ಭೂತೆ, ಉಮೇಶ ಗುಂಡಗಟ್ಟಿ ಸೇರಿದಂತೆ ಮತ್ತಿತರರು ಇದ್ದರು.