ಕೊಪ್ಪಳ 21: ಸಾರ್ವಜನಿಕರು ಸಹಕರಿಸಿದರೆ ಮಲೇರಿಯಾ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೊಡಿಸಿ ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ ಪೂಜಾರ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇರಕಲ್ಲಗಡ ಹಾಗೂ ಸರ್ಕಾರಿ ಪ್ರೌಢ ಶಾಲೆ ಲೇಬಗೇರಿ ಇವರ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಲಾದ ''ಮಲೇರಿಯಾ ವಿರೋದಿ ಮಾಸಾಚರಣೆ'' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿರುವುದರಿಂದ ಅಲ್ಲಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನಗೂನ್ಯ, ಆನೆಕಾಲು ರೋಗ, ಮೆದುಳು ಜ್ವರ ಹರಡುವ ಸಾಧ್ಯತೆ ಇರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಿ ಮಲೇರಿಯಾವನ್ನು ನಿಯಂತ್ರಿಸಬೇಕಾಗಿದೆ. ಈ ಖಾಯಿಲೆ ಆನಾಪಿಲಿಸ್ ಸೋಂಕಿತ ಸೊಳ್ಳೆಗಳಿಂದ ಒಬ್ಬರಿಂದ ಇನ್ನೋಬ್ಬರಿಗೆ ಕಚ್ಚುವದರಿಂದ ಹರಡುತ್ತದೆ. ಯಾವುದೇ ಜ್ವರವಿರಲಿ ಮೊದಲು ಸಮೀಪದ ಸಕರ್ಾರಿ ಆಸ್ಪತೆ ಹಾಗೂ ಆರೋಗ್ಯ ಸಹಾಯಕರು, ಆಶಾ ಕಾರ್ಯಕತರ್ೆಯರ ಹತ್ತಿರ ರಕ್ತ ಪರೀಕ್ಷೆ ಮಾಡಿಸಿಕೊಂಡು ಖಚಿತಪಟ್ಟರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ನೀರು ಶೇಖರಣಾ ತೊಟ್ಟಿಗಳಾದ ಡ್ರಮ್, ಬ್ಯಾರಲ್, ಕಲ್ಲಿನ ದೋಣಿ, ಮಡಿಕೆ, ಏರ್ ಕೂಲರ್ಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ನೀರಿನಲ್ಲಿ ಕಂಡು ಬರುವ ಲಾರ್ವಾಗಳನ್ನು ನಾಶ ಪಡಿಸಿಬೇಕು. ಸಾಯಾಂಕಾಲ ಮತ್ತು ಬೆಳಗಿನ ಸಮಯದಲ್ಲಿ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಸೊಳ್ಳೆಗಳ ಚಟುವಟಿಕೆ ಹೆಚ್ಚಾಗುವುದರಿಂದ ಮನೆ ಕಿಟಕಿ ಮತ್ತು ಬಾಗಿಲುಗಲನ್ನು ಮುಚ್ಚುವುದು ಸೊಳ್ಳೆ ಜಾಲರಿ ಅಳವಡಿಸುವುದು, ಮೈ ತುಂಬಾ ಬಟ್ಟೆ ಹಾಕಿಕೊಳ್ಳುವುದು, ಸೊಳ್ಳೆ ನಿಯಂತ್ರಿತ ದ್ರಾವಣ ಉಪಯೋಗಿಸುವುದು, ಮನೆ, ಶಾಲೆ, ಆಸ್ಪತ್ರೆ ಇನ್ನೀತರ ಸ್ಥಳಗಳಲ್ಲಿ ಅಲ್ಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಆರೋಗ್ಯ ಇಲಾಖೆಯಿಂದ ಕೈಗೊಂಡ ಕೀಟನಾಶಕ ಸಿಂಪರಣಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿ ಮಲೇರಿಯಾ ಮುಕ್ತ ಸಮಾಜ ನಿಮರ್ಾಣ ಮಾಡಲು ಕೈಜೋಡಿಸುವಂತೆ ವಿವಿಧ ಇಲಾಖೆಗಳು, ಸರಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸುವಂತೆ ಮನವಿ ಮಾಡಿದರು. ಹಾಗೂ ಮಳೆಗಾಲದಲ್ಲಿ ಅಲ್ಲಲ್ಲಿ ನಿಂತ ಕಲುಷಿತ ನೀರು ಕುಡಿಯುವುದರಿಂದ ವಾಂತಿ ಬೇಧಿಯಾಗುವ ಸಾಧ್ಯತೆ ಇರುವುದರಿಂದ ಆದಷ್ಟು ಶುದ್ದವಾದ ನೀರು ಸೇವಿಸುವಂತೆ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ ಪೂಜಾರ ಹೇಳಿದರು.
ಕಿರಿಯ ಆಶಾ ಸಹಾಯಕಿ ಸರೋಜಿನಿ ಮಾತನಾಡಿ, ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿಯಗಿದ್ದು ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟ ಅದನ್ನು ಬೆಳಸಬೇಕು. ಶುದ್ದವಾದ ಪರಿಸರ ಬೇಕಾದರೆ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಹರಿಸುವಂತೆ ಹಾಗೂ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವಂತೆ, ಕೈತೊಳೆಯುವ ವಿಧಾನಗಳ ಬಗ್ಗೆ, ಕ್ಷಯ ರೊಗದ ಬಗ್ಗೆ, ಹದಿ, ಹರೆಯದವರ ಆರೋಗ್ಯ ರಕ್ಷಣೆ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಬಗೇರಿ ಸರಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಬಸವರಾಜ, ಸಹ ಶಿಕ್ಷಕ ಈರಣ್ಣ ಕುಂಬಾರ, ರವಿ ಕುಮಾರ ರವರು ಉಪಸ್ಥಿತರಿದ್ದರು.